Join The Telegram | Join The WhatsApp |
ನವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಸಂಸತ್ತು ಭವನದಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದರು. ಪ್ರಸಕ್ತ ವರ್ಷದ ನಮ್ಮ ಬೆಳವಣಿಗೆಯನ್ನು 7.0% ಎಂದು ಅಂದಾಜಿಸಲಾಗಿದೆ, ಇದು ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದ ಉಂಟಾದ ಬೃಹತ್ ಜಾಗತಿಕ ಮಂದಗತಿಯ ಹೊರತಾಗಿಯೂ ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ ಅಂತ ತಿಳಿಸಿದರು.
ಇದೇ ವೇಳೆ ಬಜೆಟ್ ಮಂಡನೆಗೂ ಮುನ್ನ ಭಾರತದ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಭೇಟಿ ಮಾಡಿ ಬಜೆಟ್‌ಗೆ ಸಂಬಂಧಪಟ್ಟಂತೆ ಭೇಟಿ ಮಾಡಿದರು. ಬಳಿಕ ಅವರು ಸಂಸತ್ತು ಭವನಕ್ಕೆ ತೆರಳಿ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಭಾಗವಹಿಸಿ ಸಚಿವ ಸಂಪುಟವನ್ನು ಮುಗಿಸಿ ನೇರವಾಗಿ ಬಜೆಟ್ ಕಲಾಪಕ್ಕೆ ಆಗಮಿಸಿದರು. ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ ಅವರು ಅಮೃತ ಕಾಲದ ಮೊದಲ ಬಜೆಟ್ ಇದಾಗಿದ್ದು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿದೆ ಅಂತ ತಿಳಿಸಿದರು. ಮಹಿಳೆಯರು, ಯುವಕರು, ಒಬಿಸಿ ದಲಿತರಿಗೆ ಮನ್ನಣೆ ನೀಡುವುದು ನಮಗೆ ಬಹಳ ಮುಖ್ಯುವಾಗಿದೆ. ಇದಲ್ಲದೇ ಕೋವಿನ್, ಆಧಾರ್, ಯುಪಿಐ ವಿಶ್ವದ ಮಾನ್ಯತೆಯನ್ನು ಪಡೆದುಕೊಂಡಿದೆ ಅಂತ ತಿಳಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳವರೆಗೆ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದೇ ವೇಳೆ ಅವರು ಗರೀಬ್ ಕಲ್ಯಾಣ ಯೋಜನೆ ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಅಂತ ತಿಳಿಸಿದರು.
2014 ರಿಂದ ಭಾರತದಾದ್ಯಂತ 157 ಹೊಸ ನರ್ಸಿಂಗ್ ಕಾಲೇಜು ಆರಂಭವಾಗಿದೆ ಅಂತ ತಿಳಿಸಿದರು. ಇದೇ ವೇಳೆ ಅವರುಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಅಂತ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು ಅಂಥ ಅವರು ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಭದ್ರ ಮೇಲ್ಡಂಡೆ ಯೋಜನೆಗೆ 5630 ರೂಕೋಟಿ ಹಣವನ್ನು ಮೀಸಲು ಇಡುವುದಾಗಿ ಘೋಷಣೆ ಮಾಡಿದರು.
ಇನ್ನೂ ‘ಪ್ಯಾನ್ ಅನ್ನು ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುವುದು ಅಂತ ತಿಳಿಸಿದರು. ನಿರ್ದಿಷ್ಟ ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಪ್ಯಾನ್ ಅನ್ನು ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುವುದು. ಸುಗಮವಾಗಿ ವಾಣಿಜ್ಯ ನಡೆಸಲು ಒತ್ತು ನೀಡಲಾಗುವುದು ಅಂತ ತಿಳಿಸಿದರು.
ಇದೇ ವೇಳೆ ಬಜೆಟ್ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತ, ಈ ಬಾರಿಯ ಬಜೆಟ್‌ನಲ್ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಕೇಂದ್ರ ಸರ್ಕಾರ 80 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ ಆಹಾರವಸ್ತುಗಳ ವಿತರಣೆಯ ಯೋಜನೆ ಇನ್ನೂ ಎರಡು ವರ್ಷ ಮುಂದುವರಿಯಲಿದೆಎಂದು ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಜನ ಸಾಮಾನ್ಯರಿಗೆ ಉಚಿತ ಆಹಾರ ವಿತರಣೆ ಯೋಜನೆ ಮೂಲಕ ಅನುಕೂಲವಾಗಲಿದೆ.
ಅಗ್ಗದ ಬೆಲೆಯಲ್ಲಿ ಅಕ್ಕಿ, ಗೋಧಿ, ಸಕ್ಕರೆ ಇತ್ಯಾದಿ ಅಗತ್ಯ ಆಹಾರವಸ್ತುಗಳನ್ನುಕೇಂದ್ರ ಸರ್ಕಾರ ನೀಡುತ್ತದೆ. ಕೋವಿಡ್ ವೇಳೆ ಈ ಉಚಿತ ಆಹಾರಧಾನ್ಯ ವಿತರಣೆ ಕೋಟ್ಯಂತರ ಜನರಿಗೆ ಅನುಕೂಲವಾಗಿತ್ತು. ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟಪ್ಗಳಿಗೆ ಉತ್ತೇಜನ ಕೊಡಲು ಸರ್ಕಾರ ಅಗ್ರಿಕಲ್ಚರ್ ಆಕ್ಸಲರೇಟರ್ ಫಂಡ್ ಅನ್ನು ಸ್ಥಾಪಿಸಿದೆ. ಇದರಿಂದ ಕೃಷಿ ಕ್ಷೇತ್ರದ ಸರಬರಾಜು ಸರಪಳಿ ಮತ್ತು ಜಾಲಕ್ಕೆ ಬಲ ಸಿಗುವ ನಿರೀಕ್ಷೆ ಇದೆ. ಭಾರತದಲ್ಲಿ ಮೊದಲಿಂದಲೂ ಇದ್ದ ಈ ಸಮಸ್ಯೆಗೆ ಇದು ಪರಿಹಾರ ಒದಗಿಸುವ ಸಾಧ್ಯತೆ ಇದೆ.
ಉಜ್ವಲ ಯೋಜನೆಯಡಿ 6 ಕೋಟಿ ಜನರಿಗೆ ಸಂಪರ್ಕ, ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ. ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಶ್ರೀ ಅನ್ನ ಜೋಳ, ಶ್ರೀ ಅನ್ನ ರಾಗಿ, ಸಜ್ಜೆ ಸಿರಿಧಾನ್ಯಗಳ ಯೋಜನೆ ಜಾರಿ, ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.
Join The Telegram | Join The WhatsApp |