ವಿಜಯಪುರ:- ಜಿಲ್ಲೆಯಲ್ಲಿ ನನ್ನ ವಿರುದ್ಧ ಕೆಲವರು ಪಕ್ಷದೊಳಗೆ ಪಿತ್ತೂರಿ ಮಾಡುತ್ತಿದ್ದಾರೆ. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಲು ಕೆಲವರು ನನ್ನ ಚಾರಿತ್ರೆ ಒದ್ದೆ ಮಾಡುತ್ತಿದ್ದಾರೆ ಇದು ಮಹಾನ್ ಅಪರಾಧವೆಂದು ಬೇಸರ ವ್ಯಕ್ತಪಡಿಸಿದರು
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದರು ಕೆಲವು ಕಾಣದ ಕೈಗಳು ಕೆಲವು ಜನರಿಗೆ ಕುಡಿಸಿ ತಿನಿಸಿ ನನ್ನ ವಿರುದ್ಧ ಅಪಪ್ರಚಾರ ಮಾಡಲು ತೊಡಗಿದ್ದಾರೆ ಇದರಿಂದಾಗಿ ತಮಗೆ ಒಳ್ಳೆದಾಗುತ್ತದೆ ಎಂದು ಬಯಸಿದ್ದಾರೆ ಆದರೆ ಜನರು ಬುದ್ಧಿವಂತರಿದ್ದಾರೆ ಅವರು ಇದನ್ನೆಲ್ಲಾ ಅವಲೋಕಿಸುತ್ತಾರೆ
ಇದನ್ನು ನಾನು ಹೈಕಮಾಂಡವರಿಗೂ ತಿಳಿಸುತ್ತೇನೆ ನನ್ನ ವಿರುದ್ಧ ಹಲವಾರು ಪ್ರಕಾರವಾಗಿ ತಿರುಚಿ ಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಅವರಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತವಾದ ಉತ್ತರ ನೀಡುತ್ತೇನೆ. ಎಂದು ಹೇಳಿದರುನನಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕೇ ಸಿಗುತ್ತದೆ ಸಿಗದಿದ್ದರೂ ನನಗೇನು ಬೇಸರವಿಲ್ಲ
ನಾನು ಸಿದ್ದೇಶ್ವರ ಗುಡಿಯಲ್ಲಿ ಸೇವ ಮಾಡುತ್ತಾ ಹೊಲ ಮನೆಯಲ್ಲಿ ದುಡಿಯುತ್ತೇನೆ ಎಂದು ಹೇಳಿದರು.ನಾನು ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ ನಾನು ಹಲವು ಚುನಾವಣೆಗಳಲ್ಲಿ ಜಯಗಳಿಸಿದ್ದೇನೆ
ನಾನು ಜನರಿಗೆ ಹಣನನ್ನ ಕೈಯ ಯಾವತ್ತು ಸ್ವಚ್ಛವಾಗಿರುತ್ತದೆ ಸ್ವಚ್ಛವಾಗಿರುತ್ತದೆ ನಾನು ಸ್ವಚ್ಛ ರಾಜಕಾರಣಿಯಾಗಿ ಗುರುತಿಸಿ ಹೊಂಡು ಬಂದಿದ್ದೇನೆ ಎಂದು ತಿಳಿಸಿದರು ನಾನು ವಿಜಯಪುರ ಜಿಲ್ಲೆಗೆ 2330 ಕೋಟಿ ರೂಪಾಯಿಗಳ ಅನುದಾನ ತಂದಿದ್ದೇನೆ
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ ನಾನು ಹೈಟೆಕ್ ರಾಜಕಾರಣಿ ಅಲ್ಲ ಸಾಮಾನ್ಯ ರಾಜಕಾರಣಿಯಾಗಿದ್ದೇನೆ ಎಂದು ಹೇಳಿದರು ಬಿಜೆಪಿ ಮುಖಂಡರಾದ ಸಂಜಯ ಪಾಟೀಲ್ ಕನಮಡಿ, ರವೀಂದ್ರ ಲೋಣಿ, ವಿಜಯ ಜೋಶಿ ಮುಂತಾದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
ವರದಿ :-ಸಾಯಬಣ್ಣ ಮಾದರ