Join The Telegram | Join The WhatsApp |
ಹರಪನಹಳ್ಳಿ: ಜನಪರ ಹೋರಾಟಕ್ಕೆ ಮುಂದಾಗಿರುವ ವರ ವಿರುದ್ದ ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಇದು ರಾಜಕೀಯ ರಹಿತ ಜಾತಿ ರಹಿತ ಹೋರಾಟವಾಗಿದೆ. ನೀರಾವರಿ ಯೋಜನೆಯಿಂದ ತಾ ಲೂಕು ಅಭಿವೃದ್ದಿ ಆಗುತ್ತದೆ. ಎಲ್ಲರಿಗೂ ಗಾಳಿ ನೀರು ಬೇಕು ಎನ್ನುವುದನ್ನು ಅರಿತು ರಾಜಕಾರಣ ಮಾಡಿ. ನೀ ರು ಬೇಕಾದವರು ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಕೆಪಿಸಿಸಿ ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು.
ತಾಲೂಕಿನ ಗರ್ಭಗುಡಿ ಜಾಕ್‌ವೆಲ್‌ನ ಬಳಿ ಗಂಗಾದೇವಿ ಪೂಜೆ ನೆರವೇರಿಸಿ, ದಿವಂಗತ ಎಂ.ಪಿ.ರವೀoದ್ರರವರ ಮ ಹತ್ತರ ಯೋಜನೆಗಳಾದ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ೬೦ ಕೆರೆಗಳಿಗೆ ನೀರು ತುಂಬಿಸೋ ಯೋಜನೆ ಅನುಷ್ಠಾನ ಕ್ಕಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ನಿಟ್ಟೂರು ಜಾಕ್ ವೆಲ್ ಪಂಪ್‌ಹೌಸ್‌ಗೆ ಮುತ್ತಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾಲ್ಕುವರ್ಷ ಸುಮ್ಮನಿದ್ದು ದಿಡೀರ್ ಹೋರಾಟ ಶುರು ಮಾಡಿಕೊಂಡಿದ್ದಾರೆ ಎನ್ನುವು ದಕ್ಕೂ ಮುಂಚೆ ಆಡಳಿತ ಪಕ್ಷದ ಶಾಸಕರು ನಾಲ್ಕು ವರ್ಷ ಗಳಲ್ಲಿ ಎಷ್ಟುಬಾರಿ ಕ್ಷೇತ್ರದಲ್ಲಿ ಕಣಿಸಿಕೊಂಡಿದ್ದಾರೆ ಲೆಕ್ಕ ಹಾಕಿಕೊಳ್ಳಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಯೋಜನೆ, ಅದು ಕೂಡಾ ಆಮೆಗತಿಯಾದರೆ ಹೇಗೆ ಸರ್ವರಿಗೂ ಬೇಕಾದ ನೀರಿಗಾಗಿ ಹೋರಾಟ ಮಾಡುತ್ತಿರುವ ನಮಗೆ ಪ್ರಶ್ನೆ ಮಾಡಲು ನಾಚಿಕೆ ಆಗುವುದಿಲ್ಲವೆ. ನಾಲ್ಕು ವರ್ಷ ಗೆಣಸು ಕೆರಿತಿದ್ರಾ ಎಂದು ಪ್ರಶ್ನಿಸಿದರು.
ಕೋವಿಡ್ ಸಮಯದಲ್ಲಿ ಎಷ್ಟು ಜನರಿಗೆ ಸ್ಪಂದಿಸಿದ್ದೀರಿ. ಕಾರ್ಮಿಕರ ಕಿಟ್ ಎಷ್ಟು ಜನರಿಗೆ ಹಂಚಿದ್ದೀರ ಲೆಕ್ಕ ಕೊಡಿ. ಸ್ಯಾನಿಟೈಜರ್ ಬಾಟಲಿ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವು ದಲ್ಲ ಹೋರಾಟದಲ್ಲಿ ಭಾಗವಹಿಸುವುದು ಪ್ರತಿಯೊಬ್ಬರಿ ಗೂ ಅವಶ್ಯ ನೀರಿನಲ್ಲೂ ರಾಜಕಾರಣ ಮಾಡುವುದನ್ನು ಬಿಟ್ಟು ಸದುದ್ದೇಶದಿಂದ ಹೋರಾಟ ಆರಂಭಿಸಿದ್ದೇವೆ. ಕೂಡಲೇ ಕಾಮಗಾರಿ ಅನುಷ್ಠಾನ ಆಗದಿದ್ದರೆ ಈ ಹೋ ರಾಟ ತೀರ್ವ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿ ದರು. ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ ಕೆರೆಗಳಿಗೆ ನೀರು ತುಂಬಿಸೋ ಯೋಜನೆ ಬಹಳಷ್ಟು ವರ್ಷಗಳಿಂದ ನೆನ ಗುದಿಗೆ ಬಿದ್ದಿದೆ ಇಂತಹ ಹೋರಾಟಕ್ಕೆ ಸ್ವಾಮಿಗಳು ಖಂಡಿ ತ ಹಾಜರಗುತ್ತಾರೆ. ಹೊರತು ಯಾವುದೇ ರಾಜಕಾರಣ ಗಳ ಓಲೈಕೆಗಲ್ಲ ಪಕ್ಷದ ಹೋರಾಟಗಳಿಗೆ ನಮ್ಮ ಸಮ್ಮ ತವಿಲ್ಲ. ಬ್ರಿಡ್ಜ್ ಕಂ ಬ್ಯಾರೇಜ್, ಕೆರೆಗಳಿಗೆ ನೀರು ಸಮಗ್ರ ನೀರಾವರಿಗೆ ನಾಂಧಿಯಾಗಲಿದೆ. ಈ ಹೋರಾಟಕ್ಕೆ ನಮ್ಮ ಬೆಂಬಲ ನಿರಂತರ ಎಂದರು.
ಹೋರಾಟದಲ್ಲಿ ಅಡವಿಹಳ್ಳಿ ಹಾಲಸ್ವಾಮಿ, ಗುಡಿಹಳ್ಳಿ ಹಾಲೇಶ್, ಕವಿತಾ ವಾಗೀಶ್, ಡಾ: ಮಹಾಂತೇಶ್ ಚರಂತಿಮಠ್, ಗಾಯತ್ರಿದೇವಿ, ಗಣೇಶ್. ಸಿದ್ದನಗೌಡ ವಕೀಲ, ದಾದಾಪೀರ್, ಗುರು, ಮಹಿಳಾ ಸಂಘದ ಸದಸ್ಯರು. ರೈತ ಸಂಘಟನೆಗಳು ಭಾಗವಹಿಸಿದ್ದರು.
Join The Telegram | Join The WhatsApp |