Join The Telegram | Join The WhatsApp |
ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯ ಸನಿಹದಲ್ಲಿದ್ದಾರೆ. ಅಂಬಾನಿ ಕೇವಲ ಒಂದೇ ದಿನದಲ್ಲಿ 19,000 ಕೋಟಿ ಗಳಿಸುವ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 13ನೇ ಸ್ಥಾನಕ್ಕೇರಿದ್ದಾರೆ.
ಪ್ರಸ್ತುತ ಟಾಪ್-10ರಲ್ಲಿ ಸ್ಥಾನ ಪಡೆಯಲು ಕೇವಲ 3 ಕೈಗಾರಿಕೋದ್ಯಮಿಗಳನ್ನು ಹಿಂದಿಕ್ಕಬೇಕಿದೆ.ಕಳೆದ 24 ಗಂಟೆಗಳಲ್ಲಿ ಮುಖೇಶ್ ಅಂಬಾನಿ ಅವರ ಸಂಪತ್ತು 2 ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ.
ಈ ಹೆಚ್ಚಳದ ನಂತರ ಅಂಬಾನಿ ಅವರ ನಿವ್ವಳ ಮೌಲ್ಯವು 90 ಬಿಲಿಯನ್ ಡಾಲರ್ ದಾಟಿದೆ. ಮುಕೇಶ್ ಅಂಬಾನಿ ಈ ಪಟ್ಟಿಯಲ್ಲಿ 13 ನೇ ಸ್ಥಾನದಲ್ಲಿದ್ದಾರೆ.
12ನೇ ಸ್ಥಾನದಲ್ಲಿ ಫ್ರಾನ್ಸ್‌ನ ಫ್ರಾಂಕೋಯಿಸ್ ಬೆಟಾನ್‌ಕೋರ್ಟ್ ಮೀರ್ಸ್ ಇದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 92.6 ಬಿಲಿಯನ್ ಡಾಲರ್. ಇದಲ್ಲದೆ 11ನೇ ಸ್ಥಾನದಲ್ಲಿರುವ ಮೆಕ್ಸಿಕೊದ ಕಾರ್ಲೋಸ್ ಸ್ಲಿಮ್ ಅವರ ಆಸ್ತಿ ಸುಮಾರು 97.2 ಬಿಲಿಯನ್ ಡಾಲರ್. 10 ನೇ ಸ್ಥಾನದಲ್ಲಿ ಅಮೆರಿಕದ ಸೆರ್ಗೆ ಬ್ರಿನ್ ಇದ್ದಾರೆ, ಅವರ ಆಸ್ತಿ ಸುಮಾರು 104 ಬಿಲಿಯನ್ ಡಾಲರ್‌ನಷ್ಟಿದೆ.
Join The Telegram | Join The WhatsApp |