ಮುದಗಲ್ಲ :- ಪಟ್ಟಣದ ಬಸ್ ನಿಲ್ದಾಣದ ಅಕ್ಕ ಪಕ್ಕದ ವಾಣಿಜ್ಯ ಮಳಿಗೆ ಹಾಗೂ ಪುರಸಭೆಯ ಅಂಗಡಿ ಮಳಿಗೆಗಳಲ್ಲಿ ಬಾಡಿಗೆ ಇರುವ ಅಂಗಡಿಗಳಿಗೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಸೇರಿ ಹಾಗೂ ಸಿಬ್ಬಂದಿ ಜೊತೆ ಹಾಗೂ ತಾವೇ ಖುದ್ದು ಬಾಡಿಗೆ ವಸೂಲಾತಿಗೆ ಇಳಿದಿದ್ದರು.
ಈ ವೇಳೆ ಕೆಲ ಅಂಗಡಿಗಳಲ್ಲಿ ಒಂದು ವರ್ಷ ಎರಡು ವರ್ಷ ಬಾಡಿಗೆ ಪಾವತಿ ಮಾಡ ದಂತಹ ಮಾಲೀಕರಿಗೆ ಕಡಕ್ ಸೂಚನೆ ನೀಡಿದ್ದಾರೆ
ನಮ್ಮ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆಯನ್ನು ಬಾಕಿ ಉಳಿಸಿ ಕೊಂಡರೆ ಪುರಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಿಬ್ಬಂದಿಗಳಿಗೆ ವೇತನ ನೀಡಲು ಕಷ್ಟ ವಾಗುತ್ರಿದೆ.
ಲಕ್ಷಾಂತರ ಬಾಡಿಗೆಯನ್ನು ಈ ರೀತಿ ಬಾಕಿ ಉಳಿಸಿಕೊಂಡರೆ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಕೆಲವು ಅಂಗಡಿಗಳಿಗೆ ಬೀಗಹಾಕಿ ಬಾಡಿಗೆ ಪಾವತಿ ಮಾಡ ದಂತಹ ಮಾಲೀಕರಿಗೆ ಕಡಕ್ ಸೂಚನೆ ನೀಡಿದರು..
ವರದಿ: ಮಂಜುನಾಥ ಕುಂಬಾರ