Join The Telegram | Join The WhatsApp |
ಕಲಘಟಗಿ: ಮತ ಕ್ಷೇತ್ರದ ಜನತೆಯ ಪ್ರತಿ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಅವರು ಅಡುಗೆ ಕುಕ್ಕರ್ ನೀಡುವ ಕಾರ್ಯಕ್ರಮಕ್ಕೆ ಪತ್ನಿ ಜ್ಯೋತಿ ಛಬ್ಬಿ ಹಿರೇಹೊನ್ನಿಹಳ್ಳಿ ಗ್ರಾಮದೇವಿ ದೇವಸ್ಥಾನದಲ್ಲಿ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿ ಮತ ಕ್ಷೇತ್ರದ ಜನರಿಗೆ 5 ಲೀಟರಿನ್ ಸುಮಾರು 60 ಸಾವಿರ ಕುಕ್ಕರ್ ಖರೀದಿಸಿದ್ದು ಈಗ ಪ್ರತಿ ಕುಟುಂಬಕ್ಕೆ ವಿತರಣೆ ಮಾಡುವ ಸಲುವಾಗಿ ಮೊದಲ ಬಾರಿಗೆ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಮನೆ ಮನೆಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದರು. ನಂತರ ಮಾತನಾಡಿ ನಮ್ಮ ಪತಿ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದಾರೆ ಕಲಘಟಗಿ ಕ್ಷೇತ್ರದಿಂದ ಮೂರು ಬಾರಿ ಟಿಕೆಟ್ ನಿಂದ್ ವಂಚಿತರಾಗಿದ್ದಾರೆ 2023 ರ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುವ ಭರವಸೆಯಿದೆ ಎಂದು ಹೇಳಿದರು.
ಕಲಘಟಗಿ ಅಳ್ಳಾವರ ಮತ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರು ಕೂಡಾ ಛಬ್ಬಿಯವರ ಸ್ಪರ್ಧೆ ಮಾಡು ಅಂತಾ ಬೆಂಬಲ ನೀಡುತ್ತಿದ್ದಾರೆ ಎಂದರು. ಕಿರಣ್ ಪಾಟೀಲ್ ಕುಲಕರ್ಣಿ ಮಾತನಾಡಿ 2008 ರಿಂದ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಾ ಬಂದಿದ್ದಾರೆ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ ಇದೆ ಎಂದರು.
ನಾಗರಾಜ ಛಬ್ಬಿ ಪುತ್ರಿ ಅಶ್ವಿನಿ, ಮೊಮ್ಮಗ ಆದ್ಯವೀರ, ಅಣ್ಣಪ್ಪ ಓಲೇಕಾರ ಗುರುನಾಥ ದಾನೇನವರ, ಮದನ ಕುಲಕರ್ಣಿ, ಶಿವು ಬೆಂಡಿಗೇರಿ, ಪವನ ಬಿಡವಾಡ, ಅನಂತ ದೇಸಾಯಿ, ಬಸವಣ್ಣೆಪ್ಪ ರಾಮನಾಳ, ಸಂಗವ್ವ ಕುರುಬರ, ಯಲ್ಲಪ್ಪ ಕಾಮದೇನು, ಶಿವಕಲ್ಲಪ್ಪ ಗಬ್ಬೂರ, ಬಸವರಾಜ ರಾಮನಾಳ, ನಿಂಗಪ್ಪ ನೆನಕ್ಕಿ ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |