This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ನಂದಿನಿ ಹಾಲಿನ ದರ ನಾಳೆಯಿಂದಲೇ ಏರಿಕೆ : ಬಾಲಚಂದ್ರ ಜಾರಕಿಹೊಳಿ

balachandra jarkiholi
Join The Telegram Join The WhatsApp

ಬೆಂಗಳೂರು: ಬಹುದಿನಗಳಿಂದ ಚರ್ಚಿತವಾಗಿದ್ದ ಹಾಲಿನ ದರ ಏರಿಕೆಗೆ ಅಂತೂ ಮುಹೂರ್ತ ಕೂಡಿ ಬಂದಿದೆ. ಗುರುವಾರದಿಂದ ಹಾಲು ಹಾಗೂ ಮೊಸರಿನ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳವಾಗಲಿದೆ. ಕೆಎಂಎಫ್ ಚೇರಮನ್ ಬಾಲಚಂದ್ರ ಜಾರಕಿಹೊಳಿ ಈ ಕುರಿತು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. 2 ರೂ. ಹೆಚ್ಚಳವನ್ನು ಸಂಪೂರ್ಣ ರೈತರಿಗೆ ವರ್ಗಾಯಿಸಲಾಗುವುದು. ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಕೆಎಂಎಫ್ ಬರಲಿದೆ ಎಂದು ಅವರು ತಿಳಿಸಿದರು. ಪ್ರತಿ ದಿನ 77 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, 50 ಲಕ್ಷ ಲೀಟರ್ ನಿತ್ಯ ಮಾರಾಟವಾಗುತ್ತಿದೆ. ಇನ್ನುಳಿದ 27 ಲಕ್ಷ ಲೀಟರ್ ಹಾಲಿನಿಂದ ಬೇರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅವುಗಳಿಂದ ಬಂದ ಲಾಭವನ್ನೂ ರೈತರಿಗೆ ವರ್ಗಾಯಿಸಲು ಯೋಚಿಸಲಾಗುತ್ತಿದೆ ಎಂದೂ ಜಾರಕಿಹೊಳಿ ತಿಳಿಸಿದರು


Join The Telegram Join The WhatsApp
Bharath Vaibhav
the authorBharath Vaibhav

Leave a Reply