Join The Telegram | Join The WhatsApp |
ಇಲಕಲ್ : ಭಾರತದ ದೇಶದ ಹೆಮ್ಮೆಯ ಪುತ್ರ ಹಾಗೂ ಯುವಕರ ಶಕ್ತಿ ನೆಚ್ಚಿನ ಸ್ವಾಮಿ ವಿವೇಕಾನಂದರ ಜನ್ಮ ದಿನ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯನ್ನು ಸ ಹೆ ಮ ಹಿ ಪ್ರಾ ಶಾಲೆ ನಂದವಾಡಗಿಯಲ್ಲಿ ದಿನಾಂಕ 12/01/2023 ರಂದು ವೈಭವದಿಂದ ಆಚರಿಸಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುಮಾತೆ ವಿ ಬಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದರು.ಹಾಗೂ ಶಿಕ್ಷಕರಾದ ವಿಶ್ವನಾಥ ತೋಟಿ ವಿವೇಕಾನಂದರ ಬದುಕು, ಕಾಯಕ ಮತ್ತು ಅವರ ಏಕಾಗ್ರತೆ ಕುರಿತು ಮಾತನಾಡಿದರು.
ಕುಮಾರಿ ಮೇಘನಾ ಹೂಗಾರ ಸ್ವಾಮಿ ವಿವೇಕಾನಂದರ ವೇಷಭೂಷಣ ಧರಿಸಿ ಆಕರ್ಷಿತರಾಗಿದ್ದರು ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರು ಶ್ರೀ ಪ್ರಭಯ್ಯ ಲೂತಿಮಠ ಶಿಕ್ಷಕರಾದ ಎಸ್ ವಿ ಬಳೂಲದ, ಬಸವರಾಜ ಬಲಕುಂದಿ, ವಿಶ್ವನಾಥ ತೋಟಿ, ಶಿಕ್ಷಕಿಯರಾದ ಜಿ ಆರ್ ನದಾಫ್, ಜ್ಯೋತಿ, ವಿ ಬಿ ಕುಂಬಾರ ಹಾಗೂ ಉರ್ದು ಶಾಲೆಯ ಮುಖ್ಯ ಗುರುಗಳಾದ ಶ್ರೀ ಕರ್ನುಲ, ಗಂಗಾ ಗುರುಮಾತೆ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. ಬಸವರಾಜ ಬಲಕುಂದಿ ಸ್ವಾಗತಿಸಿ, ನಿರೂಪಿಸಿದರು ಹಾಗೂ ವಿಶ್ವನಾಥ ತೋಟಿ ವಂದಿಸಿದರು.
ವರದಿ.ದಾವಲ್ ಶೇಡಂ
Join The Telegram | Join The WhatsApp |