Join The Telegram | Join The WhatsApp |
ಗುಳೇದಗುಡ್ಡ: ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವ
ಕೆಳಗಿನ ಪೇಟೆ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಅಂಗವಾಗಿ ನವಂಬರ್ 27 ಹಾಗೂ 28 ರಂದು ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಜರುಗಲಿದೆ.
ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರದಂದು ಬೆಳಿಗ್ಗೆ 10.00 ಗಂಟೆಗೆ ರಸಪ್ರಶ್ನೆ ,ಕ್ವಿಜ್ ಕಾರ್ಯಕ್ರಮ(ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮಾತ್ರ) ನಂತರ ಬೆಳಿಗ್ಗೆ 11.00ಗಂಟೆಗೆ ರಂಗೋಲಿ ಸ್ಪರ್ಧೆ (ಮಹಿಳೆಯರಿಗೆ ಮಾತ್ರ) ಸಾಯಂಕಾಲ 7.00 ಗಂಟೆಗೆ ವಾಯ್ಸ್ ಆಫ್ ಗುಳೇದಗುಡ್ಡ ಸೀಸನ್ 2
(ಕರೋಕೆಯೊಂದಿಗೆ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ)
ಹಾಗೂ ಹಾಸ್ಯ ರಸ ಸಂಜೆ ಕಾರ್ಯಕ್ರಮ
(TV 9, ಮಜಾ ಟಾಕೀಸ್ ಖ್ಯಾತಿಯ ಮಿಮಿಕ್ರಿ ಕಲಾವಿದರಾದ ಮಹಾಂತೇಶ್ ಹಡಪದ ಕುನ್ನೂರ, ಜೂ.ವಿಷ್ಣುವರ್ಧನ್ ಹಾಗೂ ಜೂ.ರವಿಚಂದ್ರನ್ ತಂಡದಿಂದ ನೆರವೆರಿಸುವರು)
ಸೋಮವಾರದಂದು ಸಾಯಂಕಾಲ 6.00ಗಂಟೆಗೆ ಸಹಸ್ರ ದೀಪೋತ್ಸವ ಕಾರ್ಯಕ್ರಮರಾತ್ರಿ 10.30 ಕ್ಕೆ
ಸುಂದರ ಸಾಮಾಜಿಕ ನಾಟಕ,ಕೈಲಾಗದ ಗಂಡ ಕೈಲಾಸ ಕಂಡ ಈ ಎಲ್ಲ ಕಾರ್ಯಕ್ರಮಗಳಿಗೆ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಸ್ವಾಗತ ಕೋರಿದರು. ಎಲ್ಲ ಭಕ್ತಾಧಿಗಳು ಬಂದು ನೀಲಕಂಠೇಶ್ವರ ಕಾರ್ತಿಕೋತ್ಸವಕ್ಕೆ ಭಾಗವಹಿಸಬೇಕೇಂದು ಕುರುಹಿನಶೆಟ್ಟಿ ಶ್ರೀ ನೀಲಕಂಠೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ(ರಿ) ಗುಳೇದಗುಡ್ಡ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಗುಳೇದಗುಡ್ಡ
Join The Telegram | Join The WhatsApp |