ಉತ್ತರ ಪ್ರದೇಶದ Ghazipur ಜಿಲ್ಲೆಯ ಸೈದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುರಾದ್‌ಚಕ್ ಗ್ರಾಮದಲ್ಲಿ ನಡೆದ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.
ಅತಿಯಾದ ವಿದ್ಯುತ್ ಬಿಲ್, ಭಾರೀ ದಂಡ ಹಾಗೂ ಅಧಿಕಾರಿಗಳ ಒತ್ತಡದಿಂದ ಮನನೊಂದು ಪಾನ್ ಅಂಗಡಿ ಮಾಲೀಕ ಸುರೇಂದ್ರ ಕಶ್ಯಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಬರೆದಿರುವ ಆತ್ಮಹತ್ಯೆ ಪತ್ರ ಇದೀಗ ಸರ್ಕಾರದ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ವಿವರಗಳ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ವಿದ್ಯುತ್ ಇಲಾಖೆಯ ವಿಜಿಲೆನ್ಸ್ ತಂಡ ಸುರೇಂದ್ರ ನಡೆಸುತ್ತಿದ್ದ ಸಣ್ಣ ಅಂಗಡಿಯಲ್ಲಿ ಪರಿಶೀಲನೆ ನಡೆಸಿತ್ತು.
ಈ ವೇಳೆ ವಿದ್ಯುತ್ ಬಳಕೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪದಡಿ ಸುಮಾರು ₹1.12 ಲಕ್ಷ ದಂಡ ವಿಧಿಸಲಾಗಿತ್ತು. ಜೊತೆಗೆ ಬಾಕಿ ಉಳಿದಿದ್ದ ವಿದ್ಯುತ್ ಬಿಲ್ಲನ್ನೂ ಪಾವತಿಸುವಂತೆ ಸೂಚಿಸಲಾಗಿತ್ತು.
ಕನಿಕರ ತೋರದ ಅಧಿಕಾರಿಗಳು
ನಂತರ ಪ್ರಕರಣ ತಹಶೀಲ್ದಾರ್ ಕಚೇರಿಗೆ ತಲುಪಿದ ಹಿನ್ನೆಲೆಯಲ್ಲಿ ರಿಕವರಿ ಸರ್ಟಿಫಿಕೇಟ್ (RC) ಜಾರಿಯಾಯಿತು. ಇದರಿಂದ ಬಾಕಿ ಮೊತ್ತವು ಸುಮಾರು ₹1.85 ಲಕ್ಷಕ್ಕೆ ಏರಿಕೆಯಾಯಿತು ಎಂದು ತಿಳಿದುಬಂದಿದೆ.


