Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

22 ವರ್ಷಕ್ಕೆ ಐದು ಮಕ್ಕಳ ತಾಯಿ : ಗಂಡನ ಆಸೆಗೆ ಭಾರಿ ಆಕ್ರೋಶ 

Advertisement

ಲಕ್ನೋ: ಉತ್ತರ ಪ್ರದೇಶದ ಪ್ರಸೂತಿ ತಜ್ಞರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು (Viral Video) ಇಡೀ ದೇಶಾದ್ಯಂತ ಭಾರಿ ಚರ್ಚೆ ಮತ್ತು ಕಳವಳಕ್ಕೆ ಕಾರಣವಾಗಿದೆ. 

ಕೇವಲ 22 ವರ್ಷದ ಯುವತಿಯೊಬ್ಬಳು ಈಗಾಗಲೇ ಐದು ಮಕ್ಕಳ ತಾಯಿಯಾಗಿದ್ದು, ಇದೀಗ ಆರನೇ ಮಗುವಿಗೆ ಜನ್ಮ ನೀಡಲು ಸಿದ್ಧಳಾಗುತ್ತಿರುವ ಆಘಾತಕಾರಿ ಪ್ರಕರಣವೊಂದು ಈ ವಿಡಿಯೋ ಮೂಲಕ ಬೆಳಕಿಗೆ ಬಂದಿದೆ.

ಏನಿದು ಘಟನೆ?

ರಾಜಸ್ಥಾನ ಮೂಲದ ಈ ದಂಪತಿಗೆ ಕೇವಲ 15 ವರ್ಷ ವಯಸ್ಸಾಗಿದ್ದಾಗಲೇ ಬಾಲ್ಯವಿವಾಹವಾಗಿತ್ತು. ಸದ್ಯ ಇವರಿಗೆ ನಾಲ್ಕು ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಆದರೂ, ಮತ್ತೊಂದು ಗಂಡು ಮಗು ಬೇಕೇಬೇಕು ಎಂಬ ಹಠಕ್ಕೆ ಬಿದ್ದು ಈ ದಂಪತಿ ಮತ್ತೆ ಮಗುವನ್ನು ಪಡೆಯಲು ಮುಂದಾಗಿದ್ದಾರೆ.

 ಉತ್ತರ ಪ್ರದೇಶದ ಸ್ಪಂದನ್ ಆಸ್ಪತ್ರೆಯ ವೈದ್ಯೆ ಡಾ. ಪ್ರಗ್ಯಾ ತೋಮರ್ ಅವರು ದಂಪತಿಯ ಒಪ್ಪಿಗೆಯ ಮೇರೆಗೆ ಈ ಜಾಗೃತಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈದ್ಯರೊಂದಿಗೆ ಮಾತನಾಡುವಾಗ ವೇಳೆ ಆ ಯುವತಿ, "ನನಗೆ ಸತತವಾಗಿ ಹೆಣ್ಣು ಮಕ್ಕಳೇ ಆಗುತ್ತಿದ್ದಾರೆ, ನಮಗೆ ಸದ್ಯ ಒಬ್ಬನೇ ಮಗನಿದ್ದು, ಮತ್ತೊಬ್ಬ ಗಂಡು ಮಗು ಬೇಕಾಗಿದೆ" ಎಂದು ತನಗಿರುವ ಗಂಡು ಮಗುವಿನ ವ್ಯಾಮೋಹವನ್ನು ಬಿಚ್ಚಿಟ್ಟಿದ್ದಾಳೆ. 

ಇದಕ್ಕೆ ಧ್ವನಿಗೂಡಿಸಿರುವ ಆಕೆಯ ಪತಿ, ಕುಟುಂಬವನ್ನು ಸಾಕಿ ಸಲಹಲು ಮತ್ತು ವಂಶೋದ್ಧಾರ ಮಾಡಲು ಕೇವಲ ಒಬ್ಬ ಮಗ ಇದ್ದರೆ ಸಾಲದು ಎಂದು ಬೇಜವಾಬ್ದಾರಿತನದ ಮಾತನಾಡಿದ್ದಾನೆ. 

ಈ ದಂಪತಿಯ ಮಾತುಗಳು ಅಂತರ್ಜಾಲದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಮಾಜದಲ್ಲಿ ಇಂದಿಗೂ ಬೇರೂರಿರುವ ಲಿಂಗ ತಾರತಮ್ಯ ಮತ್ತು ಹೆಣ್ಣು ಮಕ್ಕಳ ಮೇಲಿನ ನಿರ್ಲಕ್ಷ್ಯದ ಧೋರಣೆಯನ್ನು ಎತ್ತಿ ತೋರಿಸಿದೆ.

ಇಷ್ಟು ಸಣ್ಣ ವಯಸ್ಸಿನಲ್ಲಿ ಹತ್ತಿರದ ಅಂತರದಲ್ಲಿ ಸತತವಾಗಿ ಗರ್ಭ ಧರಿಸುವುದರಿಂದ ಮಹಿಳೆಯ ಜೀವಕ್ಕೆ ಇರುವ ಭೀಕರ ಆರೋಗ್ಯದ ಅಪಾಯಗಳ ಬಗ್ಗೆ ವೈದ್ಯರು ಈ ದಂಪತಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. 

ಸದ್ಯ ಆ ಯುವತಿ ತೀವ್ರ ಉಸಿರಾಟದ ತೊಂದರೆ, ತಲೆಸುತ್ತು ಮತ್ತು ತೀವ್ರ ಮೈಕೈ ನೋವಿನಿಂದ ಬಳಲುತ್ತಿದ್ದು, ಇದು ಸತತ ಹೆರಿಗೆಯಿಂದ ಉಂಟಾಗುವ ರಕ್ತಹೀನತೆ, ಅಪೌಷ್ಟಿಕತೆ ಮತ್ತು ದೈಹಿಕ ಬಳಲಿಕೆಯ ಲಕ್ಷಣಗಳಾಗಿವೆ. 

"ಇಷ್ಟು ಸಾಲು ಸಾಲು ಗರ್ಭಧಾರಣೆಯಿಂದ ನೀನು ನಿನ್ನ ಪ್ರಾಣವನ್ನೇ ಪಣಕ್ಕಿಡುತ್ತಿದ್ದೀಯಾ" ಎಂದು ವೈದ್ಯರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೂಕ್ತ ವಿಶ್ರಾಂತಿ ಮತ್ತು ಚೇತರಿಕೆಗೆ ಸಮಯ ನೀಡದೆ ಹೆರಿಗೆಯಾಗುವುದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗು ಇಬ್ಬರ ಜೀವಕ್ಕೂ ಕುತ್ತು ಬರಲಿದೆ ಎಂದು ಅವರು ತಿಳಿಸಿದ್ದಾರೆ.

ನೆಟ್ಟಿಗರಿಂದ ಟೀಕೆಗಳ ಸುರಿಮಳೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವತಿಯ ಸ್ಥಿತಿಗೆ ತೀವ್ರ ಮರುಕ ವ್ಯಕ್ತಪಡಿಸಿದ್ದು, ಗಂಡು ಮಗುವಿಗಾಗಿ ಮಹಿಳೆಯರ ಮೇಲೆ ಒತ್ತಡ ಹೇರುವ ಸಾಮಾಜಿಕ ವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಕುಟುಂಬ ಯೋಜನೆ, ಜನನ ನಿಯಂತ್ರಣದ ಬಗ್ಗೆ ಇರುವ ಅರಿವಿನ ಕೊರತೆ ಮತ್ತು ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ