ಸೇಡಂ: ತಾಲೂಕಿನ ಕಾಚೂರು ಗ್ರಾಮದಲ್ಲಿ 27 ಕೋಟಿ ರೂಗಳ ವೆಚ್ಚದಲ್ಲಿ 110/33/11 ಕೆ.ವಿ ವಿದ್ಯುತ್ ಉಪಕೇಂದ್ರ ನಿರ್ಮಾಣ ಶಂಕುಸ್ಥಾಪನೆ ಭೂಮಿ ಪೂಜೆ ಹಾಗೂ ಅಡಿಗಲ್ಲನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ನೆರವೇರಿಸಿದರು.
ಗ್ರಾಮೀಣ ಭಾಗದಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜು ಹಾಗೂ ರೈತಾಪಿ ವರ್ಗಕ್ಕೆ ಅನುಕೂಲಕರವಾಗಲಿದ್ದು, ಪ್ರತ್ಯೇಕ ಉಪ ಕೇಂದ್ರ ನಿರ್ಮಾಣದಿಂದ ಕಾಚೂರು ಭಾಗದ ಸುರವಾರ, ಮುಗನೂರ, ಸೋಮಪಲ್ಲಿ, ಕುಕ್ಕುಂದಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ 110/33/11 ಕೆ.ವಿ ವಿದ್ಯುತ್ ಸರಬರಾಜು ಆಗಲಿದೆ.
ಸ್ಥಳೀಯ ವಿದ್ಯುತ್ ಪ್ರಸರಣದಿಂದ 24/7 ವಿದ್ಯುತ್ ಸರಬರಾಜು ಹಾಗೂ ರೈತರಿಗೆ ನೀರಾವರಿಗೆ ಹೆಚ್ವು ಸಹಾಯವಾಗಲಿದೆ.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಕಾರಿಗಳು, ಮುಖಂಡರು ಹಾಗೂ ತಾಲೂಕಾಡಳಿತ ಅಧಿಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.


