ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದ ತಕ್ಷಣ 40 ಶಾಸಕರು ಮತ್ತೆ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡುತ್ತೇವೆ. ಸಂಪುಟ ಪುನಾರಚನೆಗೆ ಕೋರುತ್ತೇವೆ ಎಂದು ಹಿರಿಯ ಶಾಸಕ ಬಣದ ಸದಸ್ಯ, ಕಾಂಗ್ರೆಸ್ ಮುಖ್ಯ ಸಚೇತಕ ಅಶೋಕ್ ಪಟ್ಟಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರ್ತ್‌ಡೇ ಗಿಫ್ಟ್ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ.ಅವರಿಗೆ ಅಡ್ವಾನ್ಸ್ ಹ್ಯಾಪಿ ಬರ್ತ್ ಡೇ ಎಂದರು.
ದೆಹಲಿಗೆ ಹೋಗಿ ಸುರ್ಜೇವಾಲರನ್ನು ಭೇಟಿ ಮಾಡಿದ್ದೇವೆ. ಮೇ ಎರಡನೇ ಅಥವಾ ಮೂರನೇ ವಾರಕ್ಕೆ ಸಿಹಿಸುದ್ದಿ ಕೊಡುತ್ತೇವೆ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಜತೆಗೂ ಮಾತನಾಡಿದ್ದೇವೆ. ಉಪ ಚುನಾವಣೆ ಫಲಿತಾಂಶ ತಕ್ಷಣ ಮತ್ತೆ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡುತ್ತೇವೆ ಎಂದರು.

