Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಡಿಲಿನ ಆಘಾತಕ್ಕೆ 66 ಕುರಿಗಳ ಸಾವು: ಬುದುರು ಗ್ರಾಮದಲ್ಲಿ ದುರಂತ ಶಾಸಕರ ಭೇಟಿ

Advertisement

ಗುರುಮಠಕಲ್ : ತಾಲೂಕಿನ ಕಾಕಲವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುದುರು ಗ್ರಾಮದಲ್ಲಿ ಗುಡುಗು–ಸಿಡಿಲು ಸಹಿತ ಸುರಿದ ಭಾರೀ ಮಳೆಯಿಂದಾಗಿ 66 ಕುರಿಗಳು ಸಾವನ್ನಪ್ಪಿದ ದುರ್ಘಟನೆ ಸೋಮವಾರ ಸಂಜೆ ಸಂಭವಿಸಿದೆ

ಸೋಮವಾರ ಸಂಜೆ ಅಕಸ್ಮಾತ್ ಮಳೆ ಆರಂಭವಾಗಿ ಗಾಳಿ ಹಾಗೂ ಮಿಂಚಿನ ತೀವ್ರತೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಮೇಯಲು ತೆರಳಿದ್ದ ಕುರಿಗಳು ಮರದ ಕೆಳಗೆ ಆಶ್ರಯ ಪಡೆದಿದ್ದವು ಇದೇ ವೇಳೆ ಸಿಡಿಲು ಬಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

news_1777475759_2_799.webp

 


ಈ ಘಟನೆಯಲ್ಲಿ ಸಾಯಪ್ಪ (ತಂದೆ: ಮಲ್ಲಪ್ಪ ಕಂದುಕೂರು) ಅವರಿಗೆ ಸೇರಿದ 14 ಕುರಿಗಳು, ಜಲ್ಲಪ್ಪ (ತಂದೆ: ಲಕ್ಷ್ಮಪ್ಪ) ಅವರಿಗೆ ಸೇರಿದ 22 ಕುರಿಗಳು, ಸಾಬಣ್ಣ (ತಂದೆ: ದೇವಪ್ಪ) ಅವರಿಗೆ ಸೇರಿದ 16 ಕುರಿಗಳು ಹಾಗೂ ನರಸಪ್ಪ (ತಂದೆ: ಚಂದ್ರಪ್ಪ) ಅವರಿಗೆ ಸೇರಿದ 14 ಕುರಿಗಳು ಸಾವನ್ನಪ್ಪಿವೆ ಒಟ್ಟಾರೆ 66 ಕುರಿಗಳ ಸಾವನಪ್ಪಿವೆ  ಕುರಿಗಾಹಿಗಳಿಗೆ  ಆರ್ಥಿಕ ನಷ್ಟ ಉಂಟಾಗಿದೆ
ಸುದ್ದಿ ತಿಳಿದ ಬಳಿಕ ಬುಧವಾರ ಸಂಜೆ ಗುರುಮಠಕಲ್ ಕ್ಷೇತ್ರದ ಶಾಸಕ ಶರಣುಗೌಡ ಕಂದುಕೂರು ಅವರು ಗ್ರಾಮಕ್ಕೆ ಭೇಟಿ ನೀಡಿ ಪೀಡಿತ ಕುರಿಗಾಹಿಗಳಿಗೆ ಧೈರ್ಯ ತುಂಬಿದರು ಸರ್ಕಾರದಿಂದ ಬಂದ  ಪರಿಹಾರ ಪತ್ರವನ್ನು ನೀಡಿದರು.

news_1777475759_0_948.webp

 

ಈ ಸಂದರ್ಭದಲ್ಲಿ ಗ್ರಾಮಸ್ಥರು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು ಪ್ರತಿಕ್ರಿಯಿಸಿದ ಶಾಸಕ ಶರಣುಗೌಡ ಕಂದುಕೂರು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್‌ಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗ್ರೂಪ್-2 ಅಧಿಕಾರಿ ನರಸಿಂಹ ಸ್ವಾಮಿ, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕ ಭೀಮಶೇನ್, ದೊಡ್ಡ ಬಸವರಾಜ್, ಗ್ರಾಮ ಲೆಕ್ಕಪಾಲಕ ನವನಾಥ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಭೀಮಶಪ್ಪ ಕಾನಗಡ್ಡ, ಸುಭಾಸ್ ಕಟಕಟಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷ ಪ್ರಕಾಶ್ ನೀರೇಟಿ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ರವಿ ಬುರನೋಳ್ 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಪ್‌ಗೆ ಎಂಟ್ರಿ ಪಡೆದ ಆರ್‌ಸಿಬಿಶಿವಾನಂದ ನೀಲಣ್ಣವರ್ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಬಳಿಕ ಎಲ್ಲವೂ ಬಹಿರಂಗ : ಸತೀಶ್ ಜಾರಕಿಹೊಳಿ ಪ್ರೀತಿ ವಿಷಯಕ್ಕೆ 17 ವರ್ಷದ ಮಗಳನ್ನೇ ಕೊಂದ ತಂದೆ ಶಿವಾನಂದ ನೀಲಣ್ಣವರ ವಂಚನೆ ಕೇಸ್ : 4 ಬ್ಯಾಂಕ್ ಖಾತೆಗಳು ಪ್ರೀಜ್, ಕೋಟಿ ಕೋಟಿ ಹಣ ಪತ್ತೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ 'ಎಸ್ ಸರ್' ಬದಲು ಜೈ ಶ್ರೀರಾಮ್ ಹೇಳಿ : ಶಾಸಕ ಯತ್ನಾಳ್ ಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್ನಟ ವಿಜಯ್ ತಮಿಳುನಾಡಿನ ಸಿಎಂ ಆಗಿರುವುದು ನನಗೆ ಅಸೂಯೆ ಇಲ್ಲ : ನಟ ರಜನಿಕಾಂತ್ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಇಂಧನ, ಚಿನ್ನದ ಖರೀದಿಯಲ್ಲಿ ಭಾರಿ ಇಳಿಕೆ ಇಂದು ಡಿಸಿ- ಆರ್‌ಆರ್ ಕದನಗೆಲ್ಲಲೇಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್