ಧಾರವಾಡ: ಶಾಲಾ ಮಕ್ಕಳನ್ನು ಕರೆದೊಯ್ಯಲು ಬಂದಿದ್ದ ಶಾಲಾ ವಾಹನ (School Bus) ಹರಿದು ಎರಡು ವರ್ಷದ ಕಂದಮ್ಮನೊಂದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಧಾರವಾಡ (Dharwad) ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೇರಿ (accident) ಗ್ರಾಮದಲ್ಲಿ ನಡೆದಿದೆ.ಮೃತ ಮಗುವನ್ನು ಹುಲ್ಲಿಕೇರಿ ಗ್ರಾಮದ ಲುಕ್ಮಾನ್ ಬೋಗೂರ (2) ಎಂದು ಗುರುತಿಸಲಾಗಿದೆ.
ಮಂಗಳವಾರ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲಾ ವಾಹನ ಹುಲ್ಲಿಕೇರಿ ಗ್ರಾಮಕ್ಕೆ ಬಂದಿತ್ತು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲುಕ್ಮಾನ್ ಮೇಲೆ ವಾಹನ ಹರಿದು ಹೋಗಿದೆ.
ಈ ವೇಳೆ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


