LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Feature Article

5000ಕ್ಕೆ ಪಾಠ ಮಾಡುತ್ತಿದ್ದ ಹುಡುಗ 14500 ಕೋಟಿ ರೂ. ಒಡೆಯ : ಅಲಖ್ ಪಾಂಡೆ ಸಕ್ಸೆಸ್ ಸ್ಟೋರಿ ಇಲ್ಲಿದೆ

Advertisement

'ಪ್ರಯತ್ನಂ ಸರ್ವ ಸಿದ್ಧಿ ಸಾಧನಂ' ಅಂದ್ರೆ ನಿರಂತರವಾದ ಪ್ರಯತ್ನವೇ ಎಲ್ಲಾ ಯಶಸ್ಸು ಮತ್ತು ಸಾಧನೆಗಳಿಗೆ ಮೂಲ ಮಂತ್ರ. ಯಾವುದೇ ಗುರಿಯನ್ನು ತಲುಪಲು ಕೇವಲ ಅದೃಷ್ಟ ಅಥವಾ ಹಣೆಬರಹವನ್ನು ನಂಬಿ ಕೂರದೆ, ಪ್ರಾಮಾಣಿಕವಾಗಿ ಪ್ರಯತ್ನಪಡುವುದು ಅತ್ಯಂತ ಅವಶ್ಯಕ. ಯಾರ್‍ಯಾರು ದೇಶದ ಶ್ರೀಮಂತರ ಪಟ್ಟಿಯಲ್ಲಿದ್ದಾರೋ ಅವರೆಲ್ಲರೂ ಸಣ್ಣ ಪ್ರಯತ್ನದಿಂದಲೇ ಆರಂಭಿಸಿ ಇಂದು ದೊಡ್ಡ ಮಟ್ಟಕ್ಕೆ ತಲುಪಿದ್ದಾರೆ.

ಹೀಮಾಲಯ ಪರ್ವತವನ್ನು ಒಂದೇ ಬಾರಿಗೆ ಏರಿ ಇಳಿಯುತ್ತೇನೆ ಅಂದ್ರೆ ಅದು ಅಸಾಧ್ಯವಾದುದು.

ಏಕೆಂದರೆ ಅದಕ್ಕೆ ಬಹಳ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಏನಾದರೂ ಕನಸು ಕಂಡಿದ್ದರೆ, ಸಾಧನೆ ಮಾಡಬೇಕೆಂದುಕೊಂಡಿದ್ದರೆ ಇಂದಿನಿಂದಲೇ ಸಣ್ಣ ಹೆಜ್ಜೆ ಇಡಲು ಪ್ರಯತ್ನಿಸಿ, ಅಲಖ್ ಪಾಂಡೆ ಎಂಬುವರು ನಿಮಗೆ ಗೊತ್ತಿರಬಹುದು, ಇವರು ಭಾರತದ ಪ್ರಸಿದ್ಧ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇವರು 1991ರಲ್ಲಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. ಅಲಖ್ ಪಾಂಡೆ ಅವರ ಬಾಲ್ಯವು ತೀವ್ರ ಆರ್ಥಿಕ ಸಂಕಷ್ಟಗಳಿಂದ ಕೂಡಿತ್ತು. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಎಷ್ಟು ಕಷ್ಟಕರವಾಗಿತ್ತೆಂದರೆ ಸಾಲ ತೀರಿಸಲು ಅವರ ಮನೆಯನ್ನೇ ಮಾರಾಟ ಮಾಡಬೇಕಾಗಿ ಬಂತು.

Physics Wallah ಯೂಟ್ಯೂಬ್ ಚಾನೆಲ್

ಈ ಕಾರಣದಿಂದಾಗಿ, ಅವರು ಸಣ್ಣ ಮಕ್ಕಳಿಗೆ ಟ್ಯೂಷನ್ ಹೇಳಿಕೊಡಲು ಪ್ರಾರಂಭಿಸಿದರು. ಬೋಧನೆ ಮೇಲಿನ ಆಸಕ್ತಿ ಮತ್ತು ಆರ್ಥಿಕ ಕಾರಣಗಳಿಂದಾಗಿ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ಸ್ಥಳೀಯ ಕೋಚಿಂಗ್‌ ಸೆಂಟರ್‌ಗಳಲ್ಲಿ ಪಾಠ ಮಾಡಲು ಶುರು ಮಾಡಿದರು.

ಆರಂಭದಲ್ಲಿ ಅವರಿಗೆ ಸಿಗುತ್ತಿದ್ದ ಸಂಭಳ ಐದು ಸಾವಿರ ಮಾತ್ರ. ಭೋಧನ ಆಸಕ್ತಿಯಿಂದಾಗಿ 2016ರಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳನ್ನು ಸರಳವಾಗಿ ಕಲಿಸಲು Physics Wallah ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಭೋದನೆ ಮಾಡಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಅಲಖ್‌ ಅವರು ಸಂಕೀರ್ಣವಾದ ವಿಜ್ಞಾನದ ಸೂತ್ರಗಳನ್ನು ಸರಳ ಭಾಷೆಯಲ್ಲಿ, ಹಾಸ್ಯ ಮತ್ತು ಉದಾಹರಣೆಗಳ ಮೂಲಕ ಹೇಳಿಕೊಡುವುದರಿಂದ ವಿದ್ಯಾರ್ಥಿಗಳಿಗೆ ಅವರ ಬೋಧನೆ ಇಷ್ಟವಾದ ಬೇಗನೇ ಹೆಚ್ಚು ಜನಪ್ರಿಯರಾದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SAD NEWS : ಬಾಲಿವುಡ್ ಹಿರಿಯ ನಟ 'ನಾನಾ ಪಾಟೇಕರ್' ಇನ್ನಿಲ್ಲ ಕೆನ್ಸೋ ಸೊಐ, ಹೆನ್ರಿ ಕಗಾನ್ ಗೆ, 2026ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಎರಡು ದಿನಗಳಲ್ಲಿ ರೈತರ ಖಾತೆಗೆ 2500 ರೂ. ಜಮಾ: ಡಾ. ಜಿ. ಪರಮೇಶ್ವರ್ಬೇರೆ ಕಡೆ ನೆಲೆಸಿದ್ದರೂ ವಂಶವೃಕ್ಷ ಸಿಗುತ್ತದೆ : ಹೈಕೋರ್ಟ್‌ ಇಂದು ಬೆಂಗಳೂರಿನಲ್ಲಿ ಸಿಜೆಪಿಯಿಂದ ಬೃಹತ್ ಪ್ರತಿಭಟನೆ: ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್