ಸಿಂಧನೂರು :ಕರ್ನಾಟಕ ರಾಜ್ಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಡಿಕೆ, ಶಿವಕುಮಾರ್ ಅವರ ನೇತೃತ್ವದಲ್ಲಿ ಎರಡನೆಯ ಹಂತದ ಸಚಿವ ಸಂಪುಟ ರಚನೆಯಾಗುತ್ತಿದ್ದು ಸಚಿವ ಸ್ಥಾನಕ್ಕಾಗಿ ಅವರ ಬೆಂಬಲಿಗರು ಹೈಕಮಾಂಡ್ ಮಟ್ಟದಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ನಮ್ಮ ನೆಚ್ಚಿನ ನಾಯಕ "ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ" ಅವರಿಗೆ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಸಿಗಲಿ ಎಂದು ಆಶಯದೊಂದಿಗೆ ಅವರ ದೊಡ್ಡ ಅಭಿಮಾನಿ ವಿರೇಶ ಸ್ವಾಮಿ ರಾರಾವಿ ಕೋಟೆ' ಅವರು ನಗರದಲ್ಲಿರುವ ಆದಿಶೇಷ ದೇವಸ್ಥಾನದಿಂದ ವಳಕೋಟೆ ವೀರಭದ್ರೇಶ್ವರ ದೇವಸ್ಥಾನದವರೆಗೆ
ದೀರ್ಘದಂಡ ನಮಸ್ಕಾರ ಸೇವೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಹರಕೆ ಸಲ್ಲಿಸಿದರು.
ತಮ್ಮ ನೆಚ್ಚಿನ ನಾಯಕರ ಮೇಲಿನ ಅಭಿಮಾನ,ವಿಶ್ವಾಸ ಮತ್ತು ಅವರ ಜನಪರ ಸೇವೆಗೆ ಸಿಗಬೇಕಾದ ಮಾನ್ಯತೆಗಾಗಿ ಕೈಗೊಂಡ ಈ ಭಕ್ತಿ ಸೇವೆ ಸಾರ್ವಜನಿಕರ ಗಮನ ಸೆಳೆಯಿತು ಎಂಎಲ್ಸಿ,ಬಸನಗೌಡ ಬಾದರ್ಲಿ ಅವರು ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಜವಾಬ್ದಾರಿ ಪಡೆದು ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಅವರ ಅಭಿಮಾನಿ ಬಳಗದಿಂದ ಪ್ರಾರ್ಥಿಸಲಾಯಿತು.
ವರದಿ:ಬಸವರಾಜ ಬುಕ್ಕನಹಟ್ಟಿ


