Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2500 ರೂಪಾಯಿಯಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆ ಇಂದು ಬಿಜೆಪಿ ಶಾಸಕಿ : ಯಾರು ಈ ಕಲಿತಾ ಮಾಝಿ..?

Advertisement

ಕೊಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನ ನೀಡುವ ಮೂಲಕ ಹೊಸ ಇತಿಹಾಸ ಬರೆದಿದೆ.

ಈ ಪೈಕಿ ಔಸ್‌ಗ್ರಾಮ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಕಲಿತಾ ಮಾಝಿ ಅವರ ಗೆಲುವು ದೇಶದ ಗಮನ ಸೆಳೆದಿದೆ.

ತಿಂಗಳಿಗೆ ಕೇವಲ ₹2,500 ವೇತನಕ್ಕಾಗಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಲಿತಾ ಮಾಝಿ, ಈಗ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ.

ಚುನಾವಣೆಯಲ್ಲಿ 1,07,692 ಮತಗಳನ್ನು ಪಡೆದ ಅವರು, ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ವಿರುದ್ಧ 12,535 ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. 

ಗುಸ್ಕಾರಾ ಪುರಸಭೆಯ ನಿವಾಸಿಯಾದ ಕಲಿತಾ ಮಾಝಿ, 2021ರ ಚುನಾವಣೆಯಲ್ಲೂ ಸ್ಪರ್ಧಿಸಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲುಂಡಿದ್ದರು.

ಆದರೂ, ಜನರೊಂದಿಗಿನ ಅವರ ಒಡನಾಟವನ್ನು ನಂಬಿದ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಅವರಿಗೆ ಟಿಕೆಟ್ ನೀಡಿತ್ತು. 

ಕಡು ಬಡತನದ ನಡುವೆಯೂ ಚುನಾವಣಾ ಕಣಕ್ಕಿಳಿದಿದ್ದ ಅವರ ಈ ಯಶಸ್ಸು ಪ್ರಜಾಪ್ರಭುತ್ವದ ನಿಜವಾದ ಆಶಯಕ್ಕೆ ಸಾಕ್ಷಿಯಾಗಿದೆ.

 ಅಡುಗೆ ಮನೆಯಿಂದ ವಿಧಾನಸಭೆಯವರೆಗೆ ಸಾಗಿಬಂದ ಕಲಿತಾ ಮಾಝಿ ಅವರ ಈ ಪಯಣಕ್ಕೆ ಸಿಕ್ಕ ದೊಡ್ಡ ಜಯವೆಂದೇ ವಿಶ್ಲೇಷಿಸಲಾಗುತ್ತಿದೆ.

ಯಾರು ಈ ಕಲಿತಾ ಮಾಝಿ..?

ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಕಲಿತಾ ಮಾಝಿ (37) ಅವರು ನಾಲ್ಕೈದು ಮನೆಗಳಲ್ಲಿ ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಹಾಗೂ ಅಡುಗೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

 ಮುಂಜಾನೆ 5 ಗಂಟೆಯಿಂದಲೇ ಕೆಲಸ ಆರಂಭಿಸುತ್ತಿದ್ದ ಇವರನ್ನು ಮಾಲೀಕರು ಅತ್ಯಂತ ಶಿಸ್ತುಬದ್ಧ ಹಾಗೂ ನಂಬಿಕಸ್ಥ ಮಹಿಳೆ ಎಂದು ಕರೆಯುತ್ತಿದ್ದರು. ಆ ಕಷ್ಟದ ಜೀವನದ ನಡುವೆಯೂ ಅವರು ತಮ್ಮ ಹಳ್ಳಿಯ ತಳಮಟ್ಟದ ಜನರೊಂದಿಗೆ ಆಳವಾದ ಒಡನಾಟ ಹೊಂದಿದ್ದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೇವಗೊಂಡ ಮೈದಾನ: ಆರ್‌ಸಿಬಿ ಪಂದ್ಯ ವಿಳಂಭ ಮೊದಲ ಟೆಸ್ಟ್ಗೆ ಇಂಗ್ಲೆAಡ್ ತಂಡದಾಯ್ಕೆಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿಹಿಜಾಬ್ ನಿಷೇಧ ವಾಪಸ್ ಪಡೆದ ರಾಜ್ಯ ಸರ್ಕಾರ ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು : ಬಿ. ಕೆ ಹರಿಪ್ರಸಾದ್ ಮಣ್ಣಲ್ಲಿ ಮಣ್ಣಾದ ನಟ ದಿಲೀಪ್ ರಾಜ್ : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ, ವಾಹನ ಬಳಕೆ ಶೇ. 40 ರಷ್ಟು ಕಡಿತ : ಆರ್. ಅಶೋಕ್ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯ :ವಸಂತ ಎಸ್ಚರಂಡಿ ಸ್ವಚ್ಛಗೊಳಿಸಿ, ರೋಗಭಯವಿಲ್ಲದೆ ಬದುಕುವಂತೆ ಮಾಡಿ : ನಾಗರೀಕರ ಆಗ್ರಹ