ಧಾರವಾಡ : ಮೊಬೈಲ್ ನಲ್ಲಿ ಅತಿಯಾಗಿ ನೋಡುತ್ತಿದ್ದ ಮಗಳಿಗೆ ಪೋಷಕರು ಬುದ್ದಿ ಹೇಳಿದ್ದರಿಂದ ಮನನೊಂದು ವಿಷ ಸೇವಿಸಿ ಯುವತಿ ಆತ್ಮಹತ್ಯೆ ಶರಣಾಗಿರುವ ಘಟನೆ ಧಾರವಾಡದ ಗರಗದಲ್ಲಿ ನಡೆದಿದೆ. ಮನೆಯಲ್ಲಿ ವಿಷ ಸೇವಿಸಿ ಮೇಘ ಗುಬ್ಬಣ್ಣನವರ್ (20) ಆತ್ಮಹತ್ಯೆ ಶರಣಾಗಿದ್ದಾಳೆ.
ಧಾರವಾಡದ ಖಾಸಗಿ ಕಾಲೇಜಿನಲ್ಲಿ ಮೇಘ ಡಿ ಎಡ್ ಓದುತ್ತಿದ್ದಳು ಇತ್ತೀಚಿಗೆ ಅಷ್ಟೇ ಪೋಷಕರು ಮೇಘಗೆ ಹೊಸ ಮೊಬೈಲ್ ಕೊಡಿಸಿದ್ದರು.
ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದಕ್ಕೆ ಪೋಷಕರು ಮೇಘಾಗೆ ಬುದ್ದಿ ಹೇಳಿದ್ದಾರೆ. ಅತಿಯಾಗಿ ರೀಲ್ಸ್ ನೋಡಬೇಡ ಅಂತ ಬೈದಿದ್ದಾರೆ. ಮೇಘಗೆ ಬುದ್ಧಿವಾದ ಹೇಳಿದಕ್ಕೆ ಮನನೊಂದು ಆಕೆ ವಿಷಯ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರಾತ್ರಿ ಮನೆಯಲ್ಲಿ ವಿಷ ಸೇವಿಸಿದ್ದ ಮೇಘಾಳನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೋಯ್ಯುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಗರಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


