Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಾಹ ನೋಂದಣಿಗೆ ಆಧಾರ್ ಕಾರ್ಡ್ ವಯಸ್ಸಿನ ದಾಖಲೆ ಅಲ್ಲ : ರಾಜ್ಯ ಸರ್ಕಾರ ಆದೇಶ 

Advertisement

ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ವಿವಾಹ ನೋಂದಣಿ ಸಮಯದಲ್ಲಿ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಅಥವಾ ಎಪಿಕ್ (ವೋಟರ್ ಐಡಿ) ಕಾರ್ಡ್‌ಗಳನ್ನು ಅಧಿಕೃತ ದಾಖಲೆಯಾಗಿ ಪರಿಗಣಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಹಿಂದೂ ವಿವಾಹ ನೋಂದಣಿ (ಕರ್ನಾಟಕ) ನಿಯಮಗಳು 1966ರ ಅನ್ವಯ, ಇನ್ನು ಮುಂದೆ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸುವವರು ವಯಸ್ಸಿನ ಪುರಾವೆಗಾಗಿ ಈ ಕೆಳಗಿನ ದಾಖಲೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.

ಜನನ ಪ್ರಮಾಣ ಪತ್ರ (Birth Certificate) ಅಥವಾ

ಶಾಲಾ ದೃಢೀಕರಣ ಪತ್ರ (School Leaving Certificate / SSLC Marks Card)

ವೈದ್ಯಕೀಯ ಪ್ರಮಾಣ ಪತ್ರಕ್ಕೆ ಮಾತ್ರ ಅವಕಾಶ:

ಒಂದು ವೇಳೆ ವಿವಾಹವಾಗುವ ವ್ಯಕ್ತಿಗಳ ಬಳಿ ಜನನ ಪ್ರಮಾಣ ಪತ್ರ ಮತ್ತು ಶಾಲಾ ದೃಢೀಕರಣ ಪತ್ರ ಇವೆರಡೂ ಲಭ್ಯವಿಲ್ಲದ ಜಟಿಲ ಸಂದರ್ಭಗಳಲ್ಲಿ ಮಾತ್ರ, ಅಧಿಕೃತ ವೈದ್ಯಕೀಯ ಪ್ರಮಾಣ ಪತ್ರಗಳನ್ನು (Medical Certificate) ಮಾತ್ರ ವಯಸ್ಸಿನ ದೃಢೀಕರಣಕ್ಕೆ ಪರಿಗಣಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆಧಾರ್, ವೋಟರ್ ಐಡಿಗೆ ಇಲ್ಲ ಮಾನ್ಯತೆ:

ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ನಡೆದ ರಾಜ್ಯ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಭೆಯ ತೀರ್ಮಾನದಂತೆ, ವಿವಾಹ ನೋಂದಣಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್, ಎಪಿಕ್ (ಮತದಾರರ ಗುರುತಿನ ಚೀಟಿ) ಅಥವಾ ಇನ್ನಿತರೆ ದಾಖಲೆಗಳನ್ನು ವಯಸ್ಸಿನ ಪುರಾವೆಯಾಗಿ ಸ್ವೀಕರಿಸಬಾರದು ಎಂದು ಎಲ್ಲಾ ನೋಂದಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST