LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಮೂರು ದಿನಗಳು ಕಳೆದರೂ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ, ಡಿಕೆಶಿ ಡಮ್ಮಿ ಸಿಎಂ : ಆರ್ ಅಶೋಕ್ 

Advertisement

ಬೆಂಗಳೂರು : ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ಮೂರು ದಿನಗಳು ಕಳೆದರೂ ಇನ್ನೂ ಖಾತೆ ಹಂಚಿಕೆ ಆಗದಿರುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಈ ಬೆಳವಣಿಗೆಯನ್ನು ತೀವ್ರವಾಗಿ ಟೀಕಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಇದು ಡಮ್ಮಿ ಸಿಎಂ ಸರ್ಕಾರ' ಎಂದು ವ್ಯಂಗ್ಯವಾಡಿದ್ದಾರೆ.ಸರ್ಕಾರದ ನಿರ್ಧಾರ ವಿಳಂಬದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ… ಆದರೆ ‘ಖಾತೆ’ಗಳ ಸುಳಿವೇ ಇಲ್ಲ, ಪೇಮೆಂಟ್ ಕೋಟಾ ಸಚಿವರಿಗೆ ಖಾತೆ ಹಂಚಲು ಹೈಕಮಾಂಡ್‌ ಅನುಮತಿಗಾಗಿ ಕಾಯುತ್ತಿದ್ದೀರೋ ಅಥವಾ ನಿಗದಿಯಾದ ಪೇಮೆಂಟ್ ಇನ್ನೂ ‘ಖಾತೆ’ಗೆ (Account) ಜಮಾ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಆರ್. ಅಶೋಕ್ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಮುಗಿದು ಮೂರು ದಿನಗಳೇ ಕಳೆದಿವೆ… ಆದರೆ ‘ಖಾತೆ’ಗಳ ಸುಳಿವೇ ಇಲ್ಲ! ಡಮ್ಮಿ ಸಿಎಂ @DKShivakumar ಅವರೇ, ಪೇಮೆಂಟ್ ಕೋಟಾ ಸಚಿವರಿಗೆ ಖಾತೆ ಹಂಚಲು ಹೈಕಮಾಂಡ್‌ ಅನುಮತಿಗಾಗಿ ಕಾಯುತ್ತಿದ್ದೀರೋ ಅಥವಾ ನಿಗದಿಯಾದ ಪೇಮೆಂಟ್ ಇನ್ನೂ ‘ಖಾತೆ’ಗೆ (Account) ಜಮಾ ಆಗಿಲ್ಲವೆಂದು ತಡೆ ಹಿಡಿದಿದ್ದೀರೋ? ಇತ್ತ ದೆಹಲಿಯ ‘ಕಲೆಕ್ಷನ್‌ ಏಜೆಂಟ್‌’ ರಣದೀಪ್ ಸುರ್ಜೇವಾಲಾ ಸಾಹೇಬರು, ಅಸಮಾಧಾನಗೊಂಡ ಶಾಸಕರ ಮನೆ ಮನೆಗೆ ತೆರಳಿ ತೇಪೆ ಹಚ್ಚುವುದರಲ್ಲಿ ಹಾಗೂ ಕುಸಿಯುತ್ತಿರುವ ಸರ್ಕಾರಕ್ಕೆ ‘ಪ್ಯಾಚ್‌ ವರ್ಕ್‌’ ಹಾಕುವುದರಲ್ಲೇ ಬ್ಯುಸಿ! ಅಂದಹಾಗೆ, ಇನ್ನುಮುಂದೆ ಪ್ರತಿಯೊಂದು ಕಡತಕ್ಕೂ ಸಹಿ ಹಾಕಲು ಸುರ್ಜೇವಾಲಾ ಅವರೇ ಬೆಂಗಳೂರಿಗೆ ಬರಬೇಕಾ? ವಿಧಾನಸೌಧದಲ್ಲಿ ಅವರಿಗೆ ಒಂದು ಕೊಠಡಿ ಮೀಸಲಿಟ್ಟಿದ್ದೀರಾ? ಅಥವಾ ಎಲ್ಲಾ ಫೈಲ್‌ಗಳನ್ನ ದೆಹಲಿಗೆ ಸ್ಪೀಡ್‌ ಪೋಸ್ಟ್‌ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೀರಾ ‘ರಬ್ಬರ್ ಸ್ಟ್ಯಾಂಪ್’ ಮುಖ್ಯಮಂತ್ರಿಗಳೇ? ರಾಜ್ಯದಲ್ಲಿ ನಿಜವಾದ ಸರ್ಕಾರ ನಡೀತಾ ಇದೆಯೋ ಅಥವಾ ದೆಹಲಿಯ ಹೈಕಮಾಂಡ್‌ನ ‘ರಿಮೋಟ್‌ ಕಂಟ್ರೋಲ್’ ಹೈಜಾಕ್ ನಾಟಕ ನಡೀತಾ ಇದೆಯೋ ಜನತೆಗಂತೂ ಸ್ಪಷ್ಟವಾಗಿ ಅರ್ಥವಾಗುತ್ತಿದೆ! ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ