ಬಾಗೇಪಲ್ಲಿ :ಪಟ್ಟಣದ ಚಿತ್ರಾವತಿ ನದಿ ಉಳಿವಿಗಾಗಿ ಮತ್ತು ಚಿತ್ರಾವತಿ ನದಿಗೆ ಕೊಳಚೆ ನೀರು ಬಿಡಲು ಮಾಡುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ಹಿರಿಯ ವಕೀಲರಾದ ಎ.ಜಿ.ಸುಧಾಕರ ರವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ವಕೀಲರಾದ ಎ.ಜಿ.ಸುಧಾಕರ ರವರು ಮಾತನಾಡಿ, ಚಿತ್ರಾವತಿ ನದಿಗೆ ಅದರದೇ ಪರಂಪರೆಯ ಇತಿಹಾಸವಿರುವ ನಮ್ಮ ಹೆಮ್ಮೆಯ ನದಿಯಾಗಿದೆ. ಈ ನದಿಗೆ ದಕ್ಷಿಣದ ಭಾಗದಿಂದ ಕೊಳಚೆ ನೀರನ್ನು ಚಿತ್ರಾವತಿ ನದಿ ನೀರಿಗೆ ಬಿಡಲು ಕಾಮಗಾರಿ ನಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಮಂಜುನಾಥ,ನಂಜುಂಡಪ್ಪ, ಫಯಾಜ್, ಬಾಲು, ಚನ್ನರಾಯಪ್ಪ,ಡಿ.ಟಿ.ಮುನಿಸ್ವಾಮಿ, ಮುಸ್ತಾಪ್ ಅಶ್ವತ್ಥಪ್ಪ, ಲಕ್ಷೀನಾರಯಣರೆಡ್ಡಿ, ಬಿ.ಎ.ಬಾಬಾಜಾನ್, ಹರೀಶ್, ಬಿಟಿಸೀನಾ, ಮುನಿವೆಂಕಟಪ್ಪ, ಸೋಮು, ಮಂಜುಳ, ಜಾನ್ಸೀ ಮೇಡಮ್,ರಘುನಾಥ ರೆಡ್ಡಿ, ಈಶ್ವರ ರೆಡ್ಡಿ,ವೆಂಕಟೇಶ್ ರಘುರಾಮರೆಡ್ಡಿ, ರವೀಂದ್ರ, ಜ್ಯೋತಿ, ವೆಂಕಟಶಿವಪ್ಪ, ಸಲೀಂ, ಮಂಜುನಾಥ, ಇದ್ದರೀಸ್, ಗಣೇಶ್,ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್


