LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ನೇಣಿಗೆ ಶರಣು 

Advertisement

ಧಾರವಾಡ: ಪ್ರೇಯಸಿ (Lover) ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಮನನೊಂದ ಪ್ರಿಯಕರ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ದಾನೇಶ್ವರಿ ನಗರದ ಪಿಜಿ ಯೊಂದರಲ್ಲಿ ನಡೆದಿದೆ. 

ಧಾರವಾಡ ತಾಲೂಕಿನ ಕೋಟಬಾಗಿ ಗ್ರಾಮದ ಮೂಲದ ತರುಣ್ ಸಾಗರ್ ಕುರಕುರಿ (21) ಆತ್ಮಹತ್ಯೆಗೆ ಶರಣಾದ ಈತ ಧಾರವಾಡ ನಗರದ ವಾಚ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು.

ಮನೆಯಲ್ಲಿ ಹೆಚ್ಚು ಮೊಬೈಲ್ (Mobile) ಬಳಸುತ್ತಿದ್ದೀಯ ಎಂದು ಬೈದಿದ್ದಕ್ಕೆ ಆ.12 ರಂದು ಈತನ ಪ್ರೇಯಸಿ ಮೇಘಾ ಗುಬ್ಬನ್ನವರ್ (20) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು. ಈಕೆಯ ಆತ್ಮಹತ್ಯೆ ಸುದ್ದಿ ಕೇಳಿ ಸ್ನೇಹಿತನ ರೂಮ್‌ನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ನೇಹಿತನ ರೂಮ್‌ನಲ್ಲಿ ಶವವಾಗಿ ಪತ್ತೆ!

ತರುಣ್, ಗೆಳೆಯನ ರೂಮ್‌ನಲ್ಲಿ ಬಂದು ತಂಗಿದ್ದ‌. ಕಳೆದ ರಾತ್ರಿ ಗೆಳೆಯನ ಮುಂದೆ ಹುಡುಗಿ ಜೊತೆ ಜಗಳವಾಗಿದೆ, ಆಕೆಯ ಸಹೋದರನಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದ ಎನ್ನಲಾಗಿದೆ.

ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಹಾಗೂ ತರುಣ್ ಮಧ್ಯೆ ಪ್ರೇಮ ಕಹಾನಿ ಇತ್ತು ಎಂಬುದು ಇದೀಗ ಗೊತ್ತಾಗಿದೆ.

ಈ‌ ಬಗ್ಗೆ ತರಣ್ ಸಾಗರ್ ಪೋಷಕರಿಗೆ ಕೇಳಿದರೆ ಪ್ರೇಮದ‌ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಫೋನ್‌ ಎತ್ತದೇ ಇದ್ದಾಗ ಹುಡುಕಾಟ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ