LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಾರ್ಮಿಕರ ಬೇಡಿಕೆಗಳ ಕೂಡಲೇ ಈಡೇರಿಸಬೇಕೆಂದು ಪ್ರತಿಭಟನೆ ಮುಖಾಂತರ ಮಾನ್ಯ ತಹಸೀಲ್ದಾರ್ ಅವರ ಮೂಲಕ ಮನವಿ. 

Advertisement

ರಾಮದುರ್ಗ  : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಕಾರ್ಮಿಕ ಮಂಡಳಿಯಿಂದ ನೈಜವಾಗಿ ಸಿಗುವ ಸೌಲಭ್ಯಗಳಿಂದ ಕಾರ್ಮಿಕರೆಲ್ಲರೂ ವಂಚಿತರಾಗುತ್ತಿದ್ದಾರೆ, ಹಾಗೂ ಕಟ್ಟಡ ಕಾರ್ಮಿಕರ  ನೊಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಮಕ್ಕಳಿಗೆ ಸಾಮಾಜಿಕ ಭದ್ರತೆಗಳ ಅಡಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಕಳೆದ ಎರಡು ಮೂರು ವರ್ಷಗಳಿಂದ "ಡಿ ಬಿ ಟಿ" ಮುಖಾಂತರ  ವಿಳಂಬವಾಗಿ ಹಣ ಜಮೆ ಆಗುತ್ತಿವೆ. ಹೀಗಾಗಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗದೇ ಇರುವುದು ಕಾರ್ಮಿಕರಿಗೆ ಬೇಸರವಾಗಿದೆ.

ಆದ್ದರಿಂದ ಅತೀ ಶೀಘ್ರದಲ್ಲಿ  ಸಕಾಲದಲ್ಲಿ ಹಣ ಜಮಾ ಮಾಡುವಂತೆ ಹಾಗೂ ಆನ್ ಲೈನ್ ತಂತ್ರಾಂಶದಲ್ಲಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ, ಸಮಸ್ಯೆ ಇರುವುದನ್ನು ಅತೀ ಶೀಘ್ರದಲ್ಲಿ ಸರಿಪಡಿಸುವಂತೆ ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ಬಿ.ಎಂ.ಸ್ ಕಟ್ಟಡ  ಕಾರ್ಮಿಕರ ಆಫೀಸನಿಂದ ಎಲ್ಲಾ ಕಾರ್ಮಿಕರು ಕಾಲನಡಿಗೆಯಲ್ಲಿ ಘೋಷಣೆಗಳನ್ನು ಕೂಗುವ ಮುಖಾಂತರ ತಹಸೀಲ್ದಾರ್ ಕಚೇರಿಯವರೆಗೂ ಹೊಗಿ  ಕಟ್ಟಡ ಕಾರ್ಮಿಕ ಮುಖಂಡರುಗಳ ಸಹಭಾಗಿತ್ವದಲ್ಲಿ ರಾಮದುರ್ಗ ಮಾನ್ಯ ತಹಶೀಲ್ದಾರ್  ಸಾಹೇಬರ ಮುಖಾಂತರ "ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು" ಇವರಿಗೆ, ಬಿಎಂಎಸ್ ಸಂಘಟನೆ ಮುಖಾಂತರ  ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಜಿಲ್ಲಾ ಸಂಘಟನಾ ಕಾರ್ಯದರ್ಶಿಆದ ಶ್ರೀ ಮಾರುತಿ ವಾರ್ತೆಪ್ಪನವರ, ಪ್ರೇಮ ಆಲಗುಂಡಿ  ಕಾರ್ಮಿಕ ಮುಖಂಡರುಗಳಾದ ಬಸು ಚಿಕ್ಕಮಠ ಭೀಮಸಿ ಶಿಂಧಿ ಬಾಲಕೃಷ್ಣ ವಡ್ಡರ್,ಚಿದಾನಂದ ಹರ್ತಿ, ಮಕ್ತುಮಸಾಬ್ ಅತ್ತಾರ, ಮೈಲಾರಿ ವಡ್ಡರ್, ಮಾನಿಂಗಯ್ಯ  ಹಿರೇಮಠ್, ವಿಠ್ಠಲ ವಾರ್ತೆಪ್ಪನವರ್, ಸುಭಾಶ ಜಲಗೇರಿ, ಸೋಮನಾಥ ಅಪ್ಪನ್ನವರ, ರಾಜು ಮುದಕವಿ,  ಯಂಕಪ್ಪ ದಾಸರ, ರಾಜು ಹಳೇಮನಿ, ರಮೇಶ ದಾಸರ,ಹಾಗೂ ಕಾರ್ಮಿಕರ ಸರ್ವ ಸದಸ್ಯರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

 ವರದಿ : ಮಂಜುನಾಥ ಕಲಾದಗಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ