ಬೆಳಗಾವಿ : ಬೆಳಗಾವಿ ಪತ್ರಕರ್ತರು ಭಯೋತ್ಪಾದಕರು ಹಾಗೆಯೇ ಯಾವಾಗಲೂ ವ್ಯಕ್ತಿ ಇವರನ್ನು ನಿಯಂತ್ರಣ ಮಾಡುತ್ತಿದಾನೆ ಎಂದು ನಾಳೆಗೆ ಹರಿಬಿಟ್ಟಿದ್ದ ಇಬ್ಬರು ಯೂಟ್ಯೂಬರ್‌ಗಳನ್ನು ಬೆಳಗಾವಿ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.
ಬೆಳಗಾವಿಯ ಇಬ್ಬರು ಸ್ವಯಂ ಘೋಷಿತ ಪತ್ರಕರ್ತರಾದ ಬಾಪುಗೌಡ ಪಾಟೀಲ ಹಾಗೂ ಸದಾನಂದ ಬಾಮ್ಮನೆ ಎಂಬ ಇಬ್ಬರು ಯೂಟ್ಯೂಬರ್‌ಗಳು ವಿನಾಕಾರಣ ಬೆಳಗಾವಿ ಪತ್ರಕರ್ತರು ಮಾರಾಟವಾಗಿದ್ದಾರೆ, ಭಯೋತ್ಪಾದಕರಿಗೆ ಸಹ ಆಗಿದ್ದಾರೆ ಎಂದು ನಾಳೆಗೆ ಹರಿಬಿಟ್ಟಿದ್ದರು.
ಜೊತೆಗೆ ಬೆಳಗಾವಿಯಲ್ಲಿ ನಡೆಯುವ ಎಲ್ಲಾ ಹಗರಣಗಳನ್ನು ನಾವು ಬಯಲಿಗೆಳೆಯುತ್ತೇವೆ. ಇನ್ನೂ ಜಿಲ್ಲಿಯ ಯಾವೊಂದು ಮಾಧ್ಯಮಗಳು ಧ್ವನಿ ಎತ್ತುವುದಿಲ್ಲ. ಒಬ್ಬ ವ್ಯಕ್ತಿ ನಿಯಂತ್ರಣದಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಪದೇ ಪದೇ ಹೀಯಾಳಿಸುವ ಕೆಲಸ ಮಾಡುತ್ತಿದ್ದರು.
ಸದ್ಯ ತಮ್ಮ ತಪ್ಪಿನ ಅರಿವಾದ ಹಿನ್ನಲೆಯಲ್ಲಿ ಇಬ್ಬರು ಯೂಟ್ಯೂಬರ್‌ಗಳು ಬೆಳಗಾವಿಯಾಗಿ ಕ್ಷಮೆ ಕೇಳಿದ್ದಾರೆ. ಮುಂದೆ ಈ ರೀತಿಯ ಹೇಳಿಕೆ ನೀಡುವುದಿಲ್ಲ, ಪತ್ರಕರ್ತರ ಭಾವನೆಗೆ ನೋವು ತರಿಸಿದ್ದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.


