ಧಾರವಾಡ ನಗರದ ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಪಕ್ಷದ ಕಟ್ಟಾಳು ನಿಷ್ಠಾವಂತ ಕಾರ್ಯಕರ್ತ ಶ್ರೀ ಆನಂದ್ ಮುಶಣ್ಣವರ್ ಹುಬ್ಬಳ್ಳಿ ಧಾರವಾಡ ನಗರದ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸ್ಥಾನದ ಪೈಪೋಟಿಯ ನಡುವೆಯೂ ಕೂಡಾ ಇವರನ್ನು ನೇಮಿಸಲು ಕಾರಣ ವ್ಯಕಿಯ ಸೇವೆ, ಪಕ್ಷಕ್ಕೆ ನಿಷ್ಠೆ, ಸಾಮಾಜಿಕ ಸೇವೆ, ಪಕ್ಷಕ್ಕೆ ನೀಡಿರುವ ಕೊಡುಗೆಗಳನ್ನು ಪರಿಶೀಲಿಸಿ ಇವರನ್ನು 74 ನೆ ವಿಧಾನಸಭಾ ಕ್ಷೇತ್ರಕ್ಕೆ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಇವರ ಆಯ್ಕೆಗೆ ಕಾರಣಿಭೂತರಾದ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರಾದ ದೀಪಕ್ ಚಿಂಚೋರೆ ಯವರಿಗೆ ಆನಂದ್ ಮುಶಣ್ಣವರ್ ಕೃತಜ್ಞತೆ ಸಲ್ಲಿಸಿದ್ದಾರೆ.
ಆನಂದ್ ರವರು ಪಕ್ಷದ ನಿಯಮಗಳಿಗೆ ಬದ್ಧರಾಗಿ ಯಾವದೇ ಜಾತಿ ಬೇದ ಇಲ್ಲದೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ.
ಸಂಧರ್ಭದಲ್ಲಿ ಹಿರಿಯರಾದ ಸೀನು ಗಾಂದಾಳ, ಸೋಹನ್ ಮುಶಣ್ಣವರ್, ಮುನ್ನಾ,ಗೌಸಖಾನ್, ನಾಗರಾಜ್ ಗುರಿಕಾರ್ ಅವರಿಗೆ ಸಿಹಿ ನೀಡಿ ಗೌರವಿಸಿದರು.
ವರದಿ: ವಿನಾಯಕ ಗುಡ್ಡದಕೇರಿ


