ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಯಚೂರು ಜಿಲ್ಲಾ ಉಸ್ತುವರಿ ಸಚಿವರಾದ ಡಾ. ಅಜಯ ಧರ್ಮಸಿಂಗ್ ರವರಿಗೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾ ಸಂಚಾಲಕರಾದ ಪ್ರಭುರಾಜ್ ಕೋಡ್ಲಿ ಮನವಿ ಸಲ್ಲಿಸಿ ಮಾತನಾಡಿ ಜಿಲ್ಲೇಯಲ್ಲಿ ಇತ್ತೀಚಿಗೆ ದೇವದುರ್ಗ ತಾಲೂಕಿನ ಹದ್ದಿನಹಾಳ ಗ್ರಾಮದ ದಲಿತ ಯುವಕ ಭೂಮನಂದಾನನ್ನು ಹತ್ಯೆ ಮಾಡಲಾಗಿದು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ಹಾಗೂ ಸರ್ಕಾರಿ ನೌಕರಿ ತಕ್ಷಣ ಒದಗಿಸಬೇಕು ಹಾಗೂ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂದಿಸಬೇಕು ಹಾಗೂ . ಪರಿಶೀಷ್ಠ ಜಾತಿ ಮತ್ತು ಪರಿಶೀಷ್ಠ ಪಂಗಡಗಳ ನಡುವೆ ಶಾಂತಿ ಸೌಹರ್ದತೆ ಹಾಗೂ ಸಹಬಾಳ್ವೆ ನಡೆಸಲು ಕಾನೂನು ಚೌಕಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ದಲಿತರ ಕುಂದು ಕೊರತೆಗಳ ಸಭೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳ ಮೂಲಕ ತೆಗೆದುಕೊಳ್ಳಬೇಕು. ರಾಯಚೂರು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಪರಿಶೀಷ್ಟ ಜಾತಿ ವಸತಿ ನಿಲಯಗಳಲ್ಲಿ ಆಹಾರ ಸರಬಾರಾಜು ಮಾಡದೇ ಹಣ ಪಾವತಿಯನ್ನು ಅಧಿಕಾರಿಗಳು ಮಾಡುತ್ತಿದ್ದು ಅಂತಹ ಅಧಿಕಾರಿಗಳ ಮೇಲೆ ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.


