ಕೊಪ್ಪಳ: ಕೊಪ್ಪಳ ಅಂಚೆ ವಿಭಾಗೀಯ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ, ಶಾಖಾ ಅಂಚೆ ಪಾಲಕ ಮತ್ತು ಸಹಾಯಕ ಶಾಖಾ ಅಂಚೆ ಪಾಲಕ ಹುದ್ದೆಗಳಿಗೆ 10ನೇ ತರಗತಿ ಅಂಕಗಳ ಆಧಾರದ ಮೇಲೆ ಒಟ್ಟು 13 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿತ ಶೈಕ್ಷಣಿಕ ಹಾಗೂ ಇತರೆ ಅರ್ಹತಾ ಮಾನದಂಡಗಳನ್ನು ಪೂರೈಸಿ, ಪ್ರಕಟಣೆಯಲ್ಲಿ ಸೂಚಿಸಿರುವ ವೇಳಾಪಟ್ಟಿಯಂತೆ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಆಗಸ್ಟ್ 31 ರಿಂದ ಸೆಪ್ಟೆಂಬರ್ 19 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ, ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕರ ಕಚೇರಿ ಹಾಗೂ https://indiapostgdsonline.gov.in ಸಂಪರ್ಕಿಸುವ ಮೂಲಕ ಅಂಚೆ ಇಲಾಖೆ ಸೇರುವ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ವಿಭಾಗೀಯ ಅಂಚೆ ಅಧೀಕ್ಷಕ ನಾಗರಾಜ ಪಾಟೀಲ ಪ್ರಕಟಣೆ ಮೂಲಕ ಕೋರಿದ್ದಾರೆ.


