LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕರ್ನಾಟಕ ಪ್ರೆಸ್ ಕ್ಲಬ್ ಬೆಂಗಳೂರು ನಗರ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ ಹಾಗೂ ಅಧಿಕೃತ ಆದೇಶ ವಿತರಣೆ

Advertisement

ಬೆಂಗಳೂರು:ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವನ್ನು ಬಲಪಡಿಸುವ, ರಾಜ್ಯದ ಪತ್ರಕರ್ತರಲ್ಲಿ ಒಗ್ಗಟ್ಟು ಹಾಗೂ ವೃತ್ತಿಪರತೆ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ 'ಕರ್ನಾಟಕ ಪ್ರೆಸ್ ಕ್ಲಬ್ (ರಿ)' ಬೆಂಗಳೂರು ನಗರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕೃತ ಆದೇಶ ಪತ್ರಗಳನ್ನು ವಿತರಿಸಲಾಗಿದೆ.

​ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ಮತ್ತು ದಿನಾಂಕ 20-01-2026ರ ರಾಜ್ಯ ಮಟ್ಟದ ಕಾರ್ಯಕಾರಿ ಮಂಡಳಿಯ ಸಭೆಯ ಅನುಮೋದನೆಯೊಂದಿಗೆ, ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಜಿ. ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ.
​ನೂತನ ಪದಾಧಿಕಾರಿಗಳ ವಿವರ:ಕಾರ್ಯಾಧ್ಯಕ್ಷರು ಹಾಗೂ ಶಿವಶಕ್ತಿ ಪತ್ರಿಕೆ : ಹಿರಿಯ ಪತ್ರಕರ್ತ ಆರ್. ಶಿವಕುಮಾರ್
​ಖಜಾಂಚಿ: ಮಲ್ಲೇಶ್ ಗೌಡ
​ಜಿಲ್ಲಾ ಸಮಿತಿ ಸದಸ್ಯರು: ಚೇತನ ಹಾಗೂ ಮಹೇಶ್
news_1787809495_0_717.webp

 


​ಗಣ್ಯರ ಉಪಸ್ಥಿತಿ ಹಾಗೂ ಮಾರ್ಗದರ್ಶನ:
ಈ ನೇಮಕಾತಿ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ 'ಪೊಲೀಸ್ ವಾರ್ತೆ' ಪತ್ರಿಕೆಯ ಸಂಪಾದಕ ಸುಭಾಷ್ ಆರ್. ಶೆಟ್ಟಿ, ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ರಾಜ್ಯ ಸಮಿತಿಯ ಪರವಾಗಿ ರಾಜ್ಯಾಧ್ಯಕ್ಷ ಎಸ್. ರಾಮಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ ಎಸ್.ಜಿ. ಅವರು ನೂತನ ತಂಡಕ್ಕೆ ಅಧಿಕೃತ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.
​ಸಂಘಟನೆಯ ಪ್ರಮುಖ ಉದ್ದೇಶಗಳು ಮತ್ತು ಜವಾಬ್ದಾರಿಗಳು:
​ಪತ್ರಕರ್ತರ ರಕ್ಷಣೆ: ಬೆಂಗಳೂರು ನಗರ ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ವೃತ್ತಿಜೀವನದಲ್ಲಿ ಪತ್ರಕರ್ತರು ಎದುರಿಸುವ ಸಮಸ್ಯೆಗಳು, ಸವಾಲುಗಳು ಮತ್ತು ಸಂಕಷ್ಟಗಳ ಸಂದರ್ಭದಲ್ಲಿ ಅಗತ್ಯ ನೆರವು ನೀಡುವುದು.
​ಸಾರ್ವಜನಿಕ ಹಿತಾಸಕ್ತಿ: ಪತ್ರಕರ್ತರ ವೃತ್ತಿಪರ ಹಿತಾಸಕ್ತಿಗಳ ಜೊತೆಗೆ ಸಮಾಜದ ಬಡವರು ಮತ್ತು ದುರ್ಬಲ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸಮಾಜಮುಖಿ ವಿಚಾರಗಳನ್ನು ಮುನ್ನೆಲೆಗೆ ತರುವುದು.
​ಮೌಲ್ಯಾಧಾರಿತ ಪತ್ರಿಕೋದ್ಯಮ: ಪತ್ರಿಕೋದ್ಯಮದ ತತ್ವ-ಸಿದ್ಧಾಂತಗಳು, ಪತ್ರಿಕಾ ಧರ್ಮ ಹಾಗೂ ವೃತ್ತಿಪರ ಮೌಲ್ಯಗಳಾದ ಸತ್ಯ, ನ್ಯಾಯ ಮತ್ತು ನೈತಿಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸ್ವಚ್ಛ ಮತ್ತು ಸಮಾನ ಸಮಾಜದ ನಿರ್ಮಾಣಕ್ಕೆ ಶ್ರಮಿಸುವುದು.

ವರದಿ :ರಾಜು ಮುಂಡೆ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್