ಐಗಳಿ :ತೆಲಸಂಗ ಕುಂಬಾರ ಗುರುಪೀಠದಲ್ಲಿ ಜಟಾಪಟಿ ಸ್ವಾಮೀಜಿ ಪರ ವಿರುದ್ಧ ಗುಂಪುಗಳ ಮುಖಂಡರ ನಡುವೆ ವಾಗ್ವಾದ, ಪೊಲೀಸರ ಮಧ್ಯಪ್ರವೇಶ
ಇತ್ತೀಚೆಗಷ್ಟೇ ನಡೆದ ಪಂಚಮಸಾಲಿ ಸಮಾಜದ ಗುರುಪೀಠದ ಟ್ರಸ್ಟ್ ವಿವಾದದ ಬೆನ್ನಲ್ಲೇ, ಇದೀಗ ರಾಜ್ಯದ ಪ್ರಥಮ ಕುಂಬಾರ ಸಮಾಜದ ಗುರುಪೀಠದಲ್ಲೂ ಭಿನ್ನಮತ ಸ್ಫೋಟಗೊಂಡಿದೆ.
ಟ್ರಸ್ಟ್ ವಿಚಾರವಾಗಿ ಸಮಾಜದ ಮುಖಂಡರು ಎರಡು ಗುಂಪುಗಳಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರಿಂದ, ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಕುಂಬಾರ ಗುರುಪೀಠದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಐಗಳಿ ಪೊಲೀಸರು ಮಧ್ಯಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದೆ.
ತೆಲಸಂಗ ಗ್ರಾಮದ ಕುಂಬಾರ ಗುರುಪೀಠದ ಶ್ರೀಮಠದಲ್ಲಿ ಮೇ ೨೪ರಂದು ನೂತನ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕುಂಬಾರ ಸಮುದಾಯದ ಒಂದು ಗುಂಪು ಇಂದು ಸಭೆ ಸೇರಿ ಪತ್ರಿಕಾಗೋಷ್ಠಿಗೆ ಸಜ್ಜಾಗಿತ್ತು. ಮೇ ೨೪ರ ಕಲ್ಯಾಣ ಮಂಟಪ ಉದ್ಘಾಟನಾ ಕಾರ್ಯಕ್ರಮವನ್ನು ಸಮಾಜದ ಎಲ್ಲರಿಗೂ ತಿಳಿಸದೇ ಏಕಪಕ್ಷೀಯವಾಗಿ ಹಮ್ಮಿಕೊಳ್ಳಲಾಗಿದೆ. ಮಠದ ಆಡಳಿತಕ್ಕಾಗಿ ಎಷ್ಟು ಬಾರಿ ಒತ್ತಾಯಿಸಿದರೂ ಸಮಿತಿ (ಕಮಿಟಿ) ರಚನೆ ಮಾಡುತ್ತಿಲ್ಲ. ಶ್ರೀಮಠದ ಉತ್ತರಾಧಿಕಾರಿಯು ಕಡ್ಡಾಯವಾಗಿ ಕುಂಬಾರ ಸಮಾಜಕ್ಕೆ ಸೇರಿದವರೇ ಆಗಿರಬೇಕು ಎಂಬ ನಿಯಮವನ್ನು ಮಠದ ಬೈಲಾದಲ್ಲಿ (ನಿಯಮಾವಳಿ) ಸೇರಿಸಬೇಕು.
ಪೂಜ್ಯ ಬಸವ ಗುಂಡಯ್ಯ ಸ್ವಾಮೀಜಿಯವರು ಮಹತ್ವದ ಭರವಸೆಯೊಂದನ್ನು ನೀಡಿದರು. ಮೇ ೨೪ರಂದು ನಡೆಯಲಿರುವ ಕಲ್ಯಾಣ ಮಂಟಪದ ಉದ್ಘಾಟನಾ ಸಮಾರಂಭ ಮುಗಿದ ತಕ್ಷಣವೇ ಶ್ರೀಮಠಕ್ಕೆ ನೂತನ ಕಮಿಟಿ ರಚನೆ ಮಾಡಲಾಗುವುದು. ಅಲ್ಲದೆ, ಕುಂಬಾರ ಸಮಾಜದವರನ್ನೇ ಮಠದ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲಾಗುವುದು ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.
ಸ್ವಾಮೀಜಿಯವರ ಈ ನಿರ್ಧಾರಕ್ಕೆ ಭಿನ್ನಮತ ಹೊಂದಿದ್ದ ಇನ್ನೊಂದು ಗುಂಪು ಸಮ್ಮತಿ ಸೂಚಿಸಿದ್ದರಿಂದ ಸದ್ಯಕ್ಕೆ ವಿವಾದ ಸುಖಾಂತ್ಯಗೊಂಡಂತಾಗಿದೆ.
ಆದಾಗ್ಯೂ, ಮೇ ೨೪ರ ಕಾರ್ಯಕ್ರಮದ ನಂತರದ ಬೆಳವಣಿಗೆಗಳ ಮೇಲೆ ಸಮಾಜದ ಬಾಂಧವರು ಕಣ್ಣಿಟ್ಟಿದ್ದು, ಚಿಕ್ಕ ಸಮುದಾಯ. ರಾಜ್ಯದಲ್ಲಿರುವುದು ಕುಂಬಾರ ಗುರಪೀಠ ಒಂದೇ ಆಗಿದ್ದು ನಮ್ಮನಮ್ಮಲ್ಲಿಯೇ ಕಚ್ಚಾಟ ಬೇಡ ಎಂಬ ಮುಖಂಡರ ಅಭಿಪ್ರಾಯಕ್ಕೆ ಸಮ್ಮತಿಸಿ ಸಭೆ ಶಾಂತಗೊಂಡಿತು.
ಸಮಾಜದ ಮುಖಂಡರಾದ ನಿವೃತ್ತ ಡಿವಾಯ್‌ಎಸ್‌ಪಿ ಸೋಮಲಿಂಗ, ಬಿ.ಜಿ.ನಾಗೂರ, ಬಸವರಾಜ ಕುಂಬಾರ, ಗುರುರಾಜ ಕುಂಬಾರ, ಜಡೆಪ್ಪಾ ಕುಂಬಾರ, ಸದಾನಂದ ಕುಂಬಾರ, ರಮೇಶ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ದರ.ಶಶಿಧರ ಕುಂಬಾರ, ಡಾ.ಎಸ್.ಪಿ.ಕುಂಬಾರ, ಸಿ.ಜಿ.ಕುಂಬಾರ ಸೇರಿದಂತೆ ಅಕೇಕರು ಐಗಳಿ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ ಸಾಗನೂರ ಹಾಗೂ ಸಿಬ್ಬಂದಿಗಳು ಬಂಧೂಬಸ್ತ ಕೈಗೊಂಡಿದ್ದರು.
ವರದಿ:ಆಕಾಶ ಮಾದರ


