Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಕೃಷಿ ಅಧಿಕಾರಿಗಳಿಂದ ರೈತರಿಗೆ ರಸಗೊಬ್ಬರ ಬೀಜ ಕ್ರಿಮಿನಾಶಕ ಅನುಕೂಲತೆ ಬಗ್ಗೆ ಮಹತ್ವದ ಸಭೆ :  ಬಸನಗೌಡ ದದ್ದಲ್

Advertisement

ರಾಯಚೂರು :  ಗ್ರಾಮೀಣ ಕ್ಷೇತ್ರದ ಶಾಸಕರ ಕಾರ್ಯಾಲಯದಲ್ಲಿ  ಇಂದು ಶಾಸಕರಾದ ಶ್ರೀ ಬಸನಗೌಡ ದದ್ದಲ್ ರವರು  ಮುಂಗಾರು ಹಂಗಾಮಿನ ಕೃಷಿ ಸಿದ್ಧತೆಗಳ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ,  ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಲಭ್ಯತೆ, ಪೂರೈಕೆ ಮತ್ತು ರೈತರಿಗೆ ಸಕಾಲದಲ್ಲಿ ವಿತರಣೆ ಕುರಿತಾಗಿ ಸಮಗ್ರ ಚರ್ಚೆ ನಡೆಸಲಾಯಿತು. ರೈತರಿಗೆ ಯಾವುದೇ ಕೊರತೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
 ಆಂಧ್ರ ಮತ್ತು ತೆಲಂಗಾಣ ಗಡಿಭಾಗಗಳಿಂದ ಬರುವಂತಹ ನಕಲಿ ಬೀಜ ಮತ್ತು ನಕಲಿ ರಸಗೊಬ್ಬರ ಅವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಂಬಂಧ ಪಟ್ಟ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಅಧಿಕಾರಿಗಳಿಗೆ ಸಹಾಯಕ ಕೃಷಿ ನಿರ್ದೇಶಕರಿಗೆ ಮಾಹಿತಿ ನೀಡಿದರು.

 ರೈತರಿಗೆ ರಸಗೊಬ್ಬರದ ಬಗ್ಗೆ ಯಾವುದೇ ಕೊರತೆ ಉಂಟಾಗಬಾರದು. ಕೊರತೆ ಉಂಟಾಗದಂತೆ ಸೊಸೈಟಿ ಮೂಲಕ ರಸ ಗೊಬ್ಬರವನ್ನು ವಿತರಿಸಬೇಕು ರಸಗೊಬ್ಬರ ಅಂಗಡಿ ಮಾಲೀಕರು ಯಾವುದಾದರೂ ರಸಗೊಬ್ಬರಕ್ಕೆ ಜೋಡಣೆ ಮಾಡಿ ನೀಡಿದ್ದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

 ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ರೈತರಿಗೆ ಬೇಕಾಗುವ ಬೀಜಗಳು ಜಿಪ್ಸಂ ಪೊಟ್ಯಾಶ್ ಮತ್ತು ಕ್ರಿಮಿ ನಾಶಕಗಳು ಸಂಪೂರ್ಣವಾಗಿ ಒದಗಿಸಿ ಕೊಡಬೇಕೂ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಆರು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳಿಗೆ ಯರಗೇರಾ .ಚಂದ್ರಬಂಡ .ಗೆಲ್ಲೆಸೂಗೂರು. ರಾಯಚೂರು. ಕಲಮಲ .ದೇವಸೂಗೂರು.

 ರೈತ ಸಂಪರ್ಕ ಕೇಂದ್ರಕೃಷಿ ಅಧಿಕಾರಿಗಳಿಗೆ ತಿಳಿಸಿದರು ನನ್ನ ಗ್ರಾಮಾಂತರ ಕ್ಷೇತ್ರದ ರೈತರುಗಳಿಂದ ಕೃಷಿ ಅಧಿಕಾರಿಗಳ ಮೇಲೆ ಯಾವುದಾದರೂ ದೂರುಗಳು ಕಂಡುಬಂದಲ್ಲಿ ತಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ದೀಪ ಎಲ್. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು .ಸಹಾಯಕ ಕೃಷಿ ನಿರ್ದೇಶಕರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಗಾರಲದಿನ್ನಿ ವೀರನಗೌಡ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಂಬಲ್ಡನ್ ಟೆನಿಸ್: ಫೈನಲ್ ತಲುಪಿದ ಜಾನ್ನಿಕ್ ಸಿನ್ನೇರ್ಇಂದು ಜಿಂಬಾಬ್ವೆ- ಬಾಂಗ್ಲಾದೇಶ ಮೂರನೇ ಏಕದಿನ ಪಂದ್ಯಭಾರತ ಇಂಗ್ಲೆAಡ್ ಕಡೆಯ ಟ್ವೆಂಟಿ-೨೦ ಇಂದುಮೊಬೈಲ್‌ನಲ್ಲಿ ರೈಲು ಟಿಕೆಟ್ ತೋರಿಸಿದ್ದರೇ ದಂಡ : ರೈಲು ಇಲಾಖೆ ಹೊಸ ನಿಯಮ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರಿ  : ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ ತಿಪಟೂರಿನ ಕೊಬ್ಬರಿ, ಸಾಣಿಕಟ್ಟೆ ಉಪ್ಪು ಸೇರಿ ರಾಜ್ಯದ ನಾಲ್ಕು ಉತ್ಪನ್ನಗಳಿಗೆ ಜಿಐ ಮಾನ್ಯತೆ ಉತ್ತಮ ಮೊತ್ತದತ್ತ ಭಾರತ ವನಿತೆಯರುಸರ್ವೋಚ್ಚ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆ : ಕಡತಗಳನ್ನ ಸಿಜೆಗೆ ಎಸೆದ ಅರ್ಜಿದಾರಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್