
ಕಲಾದಗಿ : ಬಾಗಲಕೋಟೆ ಜಿಲ್ಲೆಯ ಹಲವು ಕಡೆ ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ಕೊಡದೇ ಆಟಾಡಿಸುತ್ತಿದ್ದ ಅಧಿಕಾರಿಗಳ ವರ್ತನೆಗೆ ಬೇಸರಗೊಂಡು. ಬಾಗಲಕೋಟೆಯ ರೈತರು ಒಬ್ಬರು ಬಸಪ್ಪ ದೊಡಮನಿ ಅಧಿಕಾರಿಗೆ ಚಪ್ಪಲಿಯಿಂದ ಥಳಿಸಿ ಆಕ್ರೋಶ ಹೊರ ಹಾಕಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದ ಬಾಗಲಕೋಟೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಬಿಟಿಡಿಎ ಅಧಿಕಾರಿ ನೀಲಕಂಠ ಅಂಕದ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಟಿಡಿಎ ನೌಕರರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ ಬಿ ಬಳ್ಳಾರಿ ಮಾತನಾಡಿ ಹಲ್ಲೇ ಮಾಡಿದ ಆರೋಪಿ ಬಸಪ್ಪ ದೊಡಮನಿ ಯನ್ನು ತಕ್ಷಣ ಬಂಧಿಸಬೇಕೆಂದು ಎಂದು ಆಗ್ರಹಿಸಿದರು. ಈ ವಿಷಯಕ್ಕೆ ಸಂಬಂಧಿಸಿದ ಆರೋಪಿ ಬಸಪ್ಪನನ್ನು ಬಂಧನ ವಾಗುವವರೆಗೂ ಬಿಟಿಡಿಎ ಸೇವೆಯನ್ನು ಸ್ಥಗಿತಗೊಳಿಸಿ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು. ಈ ಪ್ರಕರಣ ದಾಖಲಾಗಿದ್ದರು ಆರೋಪಿಯಾದ ಬಸಪ್ಪ ನನ್ನು ಬಂದನವಾಗದಿರುವುದಕ್ಕೆ ಅನುಮಾನ ವ್ಯಕ್ತಪಡಿಸಿದರು. ಸರ್ಕಾರಿ ಕಚೇರಿಗೆ ಬಂದು ಕಾರ್ಯನಿರ್ವಹಿಸುತ್ತಿದ್ದ ನೌಕರರ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ ಮತ್ತು ಸರ್ಕಾರಿ ನೌಕರರಿಗೆ ಯಾವುದೇ ರೀತಿಯಾದ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತೊಂದು ದೂರು ದಾಖಲಿಸುವಂತೆ ಒತ್ತಾಯಿಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನೌಕರ ನೀಲಕಂಠ ಅಂಕದ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪ್ರಾಧಿಕಾರ ನೌಕರರ ಪ್ರತಿಭಟನೆಯಲ್ಲಿ ನೀಲಕಂಠ ಪುತ್ರಿ ಪವಿತ್ರ ಭಾಗವಹಿಸಿ ಮಾತನಾಡಿ ನಮ್ಮ ತಂದೆಯ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ನೀಲಕಂಠ ಅಂಕದ ಅವರ ಪುತ್ರಿ ಪಲ್ಲವಿ ಅಂಕದ ಭಾಗವಹಿಸಿ ಮಾತನಾಡಿ ನಮ್ಮ ತಂದೆಯ ಮೇಲೆ ಹಲ್ಲೇಯ ಪ್ರಕರಣದಲ್ಲಿ ನ್ಯಾಯ ದೊರಕಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಒದಗಿಸಬೇಕು. ನಮ್ಮ ತಂದೆಯೇ ಯಾವುದೇ ತಪ್ಪಿಲ್ಲ. ಅವರು ಆ ಪ್ರಕರಣವನ್ನು ನಿರ್ವಹಿಸುತ್ತಿರಲಿಲ್ಲ ಈ ಪ್ರಕರಣದ ಬಗ್ಗೆ ಮಾಹಿತಿ ಬೇಕಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಕೇಳಬೇಕಿತ್ತು ಆದರೆ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಘಟನೆಯ ಸಂದರ್ಭದಲ್ಲಿ ಯಾರು ಸಹಾಯಕ್ಕೆ ಬಂದಿಲ್ಲ ನಮ್ಮ ತಂದೆಯ ಮೇಲಿನ ಹಲ್ಲೆಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು..
ವರದಿ : ಬಸವರಾಜ ಪೂಜಾರಿ


