LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

200 ವರ್ಷಗಳ ಬಳಿಕ ಹುಟ್ಟಿದ ಹೆಣ್ಣು ಮಗು : ಅದ್ಧೂರಿ ಮೆರವಣಿಗೆ ಭರ್ಜರಿ ಸ್ವಾಗತ 

Advertisement

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯಲ್ಲಿ ಅಪರೂಪದ ಹಾಗೂ ವಿಶೇಷ ಸನ್ನಿವೇಶವೊಂದು ನಡೆದಿದೆ. ಸತತ ಐದು ತಲೆಮಾರುಗಳಿಂದ, ಅಂದರೆ ಸುಮಾರು 200 ವರ್ಷಗಳಿಂದ ಹೆಣ್ಣುಮಗುವಿನ ಮುಖವನ್ನೇ ಕಾಣದಿದ್ದ ದಹಿಫಾಲೆ ಕುಟುಂಬದಲ್ಲಿ ಕೊನೆಗೂ ಮಹಾಲಕ್ಷ್ಮಿಯ ಆಗಮನವಾಗಿದೆ.

ರಿಷಿಕೇಶ್‌ ದಹಿಫಾಲೆ ಹಾಗೂ ಕಲ್ಪನಾ ದಹಿಫಾಲೆ ದಂಪತಿಗೆ ಹೆಣ್ಣುಮಗು ಜನಿಸಿದ್ದು, ಮಗುವಿಗೆ 'ಗರ್ಗಿ' ಎಂದು ನಾಮಕರಣ ಮಾಡಲಾಗಿದೆ.

ಈ ಸವಿನೆನಪಿಗಾಗಿ ಕುಟುಂಬಸ್ಥರು ಹಬ್ಬದ ವಾತಾವರಣ ನಿರ್ಮಿಸಿ, ಮಗುವನ್ನು ಅದ್ದೂರಿಯಾಗಿ ಮನೆಗೆ ಬರಮಾಡಿಕೊಂಡಿದ್ದಾರೆ.

ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುತ್ತಿದ್ದಂತೆ ದಹಿಫಾಲೆ ಕುಟುಂಬಸ್ಥರು ವಿಶೇಷ ಸಮಾರಂಭವನ್ನು ಆಯೋಜಿಸಿದ್ದರು. ಸುಂದರವಾಗಿ ಹೂವುಗಳಿಂದ ಅಲಂಕರಿಸಿದ್ದ ಸಾರೋಟಿನಲ್ಲಿ ತಾಯಿ ಕಲ್ಪನಾ ಮತ್ತು ನವಜಾತ ಶಿಶು ಗರ್ಗಿಯನ್ನು ಕೂರಿಸಿ, ವಾದ್ಯ-ಮೇಳಗಳ ನಾದದೊಂದಿಗೆ ಗ್ರಾಮದ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಲಾಯಿತು.

ತಮ್ಮ ಮನೆತನಕ್ಕೆ ಸುದೀರ್ಘ ಕಾಲದ ನಂತರ ಕಾಲಿಟ್ಟ 'ರಾಜಕುಮಾರಿ'ಗೆ ಕುಟುಂಬಸ್ಥರು ನೀಡಿದ ಈ ರಾಜೋಪಚಾರ ಮತ್ತು ಆಚರಣೆಯನ್ನು ಕಂಡು ಇಡೀ ಗ್ರಾಮಸ್ಥರೇ ಸಂಭ್ರಮದಲ್ಲಿ ಭಾಗಿಯಾಗಿ ಹಾರೈಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SAD NEWS : ಬಾಲಿವುಡ್ ಹಿರಿಯ ನಟ 'ನಾನಾ ಪಾಟೇಕರ್' ಇನ್ನಿಲ್ಲ ಕೆನ್ಸೋ ಸೊಐ, ಹೆನ್ರಿ ಕಗಾನ್ ಗೆ, 2026ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಎರಡು ದಿನಗಳಲ್ಲಿ ರೈತರ ಖಾತೆಗೆ 2500 ರೂ. ಜಮಾ: ಡಾ. ಜಿ. ಪರಮೇಶ್ವರ್ಬೇರೆ ಕಡೆ ನೆಲೆಸಿದ್ದರೂ ವಂಶವೃಕ್ಷ ಸಿಗುತ್ತದೆ : ಹೈಕೋರ್ಟ್‌ ಇಂದು ಬೆಂಗಳೂರಿನಲ್ಲಿ ಸಿಜೆಪಿಯಿಂದ ಬೃಹತ್ ಪ್ರತಿಭಟನೆ: ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್