ನಿಪ್ಪಾಣಿ : ಶತಮಾನೋತ್ಸವ ಆಚರಿಸಿಕೊಂಡ ಬೆಳಗಾವಿ ಜಿಲ್ಲೆಯಲ್ಲಿಯೇ ಹಿರಿಯ ಸಂಸ್ಥೆ ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮುಂಬರುವ ಅವಧಿಗೆ ಅಧ್ಯಕ್ಷರಾಗಿ ಸಚಿನ್ ಕಿರಣ್ ಕೆಸ್ತೆ ಹಾಗೂ ಉಪಾಧ್ಯಕ್ಷರಾಗಿ ಭರತ್ ಗುರವ ಅವಿರೋಧವಾಗಿ ಆಯ್ಕೆಯಾದರು. ಪಿಕೆಪಿಎಸ್ ಕಾರ್ಯಾಲಯದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಚಿಕ್ಕೋಡಿ ಸಹಕಾರಿ ಸಂಘ ಸಹಾಯಕ ನಿಬಂಧಕರ ಕಾರ್ಯಾಲಯದ CDO ಎಂ. ಎಸ್ ಪತ್ತಾರ ಕಾರ್ಯ ನಿರ್ವಹಿಸಿದರು. ಸಭೆಯಲ್ಲಿ ನೂತನ ಅಧ್ಯಕ್ಷ ಸಚಿನ್ ಕೇಸ್ತೆ ಅವರ ಹೆಸರನ್ನು ಪ್ರಶಾಂತ ಪಾಟೀಲ್ ಸೂಚಿಸಿದರು. ಅದಕ್ಕೆ ಡಾ. ಸುದರ್ಶನ್ ಮೂರಾಬಟ್ಟೆ ಅನುಮೋದನೆ ನೀಡಿದರು. ಅದೇರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಭರತ್ ಗುರವ ಅವರ ಹೆಸರನ್ನು ರಂಜನಾ ಮುರಾಬಟ್ಟೆ ಸೂಚಿಸಿದರು ಅದಕ್ಕೆ ಅಶ್ವಿನಿ ಮಮದಾಪೂರೆ ಅನುಮೋದನೆ ನೀಡಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರತ್ಯೇಕ ಒಂದೊಂದೇ ಅರ್ಜಿ ಬಂದಿದ್ದರಿಂದ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣೆ ಅಧಿಕಾರಿ ಘೋಷಿಸಿದರು. ಈ ಸಂದರ್ಭದಲ್ಲಿ ಕಲ್ಲಪ್ಪಣ್ಣ ಅವಾಡೆ ಜನತಾ ಬ್ಯಾಂಕಿನ ಸಂಚಾಲಕ, K.A.T. P ನಿರ್ದೇಶಕ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳ ಸಂಸ್ಥಾಪಕ ಹಾಗೂ ಸದ್ಯ ನೂತನ PKPS ಅಧ್ಯಕ್ಷರಾಗಿ ಆಯ್ಕೆಯಾದ ಕಿರಣ ಕೇಸ್ತೆ ಮಾತನಾಡಿ ಗ್ರಾಮೀಣ ಭಾಗದಲ್ಲಿಯೇ ಅತ್ಯಂತ ಆರ್ಥಿಕ ಅಭಿವೃದ್ಧಿ ಹೊಂದಿದ ಶತಮಾನೋತ್ಸವ ಆಚರಿಸಿಕೊಂಡ PKPS ಸಂಸ್ಥೆ ರೈತರ ಜೀವನಾಡಿಯಾಗಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಶಿಖರ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಸಂಚಾಲಕರಾದ ಸಂತೋಷ ಚವಾಣ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪಾಟೀಲ್ ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ


