LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಎಐ ಬಳಸಿ ಕೃತಕ ಮೊಸಳೆ ಸೃಷ್ಟಿ: ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ 

Advertisement

ಆಧುನಿಕ ಯುಗದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಿವೆ. ಅದರಲ್ಲೂ ಎಐ ಬಳಕೆಯಂತೂ ಇಂದು ಸಾಮಾನ್ಯ ಜೀವನದಲ್ಲೂ ಮುಖ್ಯ ಎಂಬಂತಾಗಿದೆ. ಈ ನಡುವೆ ಎಐ ತಂತ್ರಜ್ಞಾನ ಬಳಸಿ ನಕಲಿ ಮಾಹಿತಿ, ಫೋಟೊ ಬಳಸಿ ನೈಜ ಎಂಬಂತೆ ಬಿಂಬಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದೀಗ ಸಿಂಗಾಪುರದ ವ್ಯಕ್ತಿಯೊಬ್ಬ ಜೆಮಿನಿ ಆಯಪ್ ಬಳಸಿ ಕೃತಕವಾಗಿ ಸೃಷ್ಟಿಸಿದ ಮೊಸಳೆ ಫೋಟೊ ಕಳಿಸಿ (Viral News)ತೊಂದರೆಗೆ ಸಿಲುಕಿದ್ದಾನೆ.

ನಕಲಿ ಎಐ ಫೋಟೊ ಹಂಚಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು ಮತ್ತು ಸರ್ಕಾರದ ಸಂಪನ್ಮೂಲಗಳನ್ನು ಅನವಶ್ಯಕ ವಾಗಿ ಬಳಸುವಂತೆ ಮಾಡಿದ್ದಕ್ಕೆ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಲಾಗಿದೆ.

ಆಗಸ್ಟ್ 20ರಂದು ಸಿಂಗಾಪುರದ ಯೇ ಲಿನ್ ಎಂಬ ವ್ಯಕ್ತಿ ಜೆಮಿನಿ ಆಯಪ್ ಬಳಸಿ ಮೊಸಳೆಯನ್ನು ಕೃತಕವಾಗಿ ಸೃಷ್ಟಿಸಿ ಸ್ನೇಹಿತನಿಗೆ ಫೋಟೊ ಕಳುಹಿಸಿದ್ದ. ಈ ಫೋಟೊ ವೈರಲ್ ಆಗುತ್ತಿದ್ದಂತೆ ನಿಜವೆಂದು ಭಾವಿಸಿ ಸಿಂಗಾಪುರದ ರಾಷ್ಟ್ರೀಯ ಜಲ ಸಂಸ್ಥೆ PUBಗೆ ಪಾಂಡನ್ ಜಲಾಶಯದಲ್ಲಿ ಬೃಹತ್ ಶೋಧ ಕಾರ್ಯ ಆರಂಭಿಸಿದೆ. ಅಲ್ಲಿದ್ದ ಜನರಿಗೆ ಕಟ್ಟೆಚ್ಚರ ನೀಡಲಾಗಿ ಜಲಾಶಯದಲ್ಲಿನ ದೋಣಿ ವಿಹಾರ ಮತ್ತು ಜಲ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ನಕಲಿ ಎಐ ಫೋಟೊ ಹಂಚಿಕೊಂಡು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು ಮತ್ತು ಸರ್ಕಾರದ ಸಂಪನ್ಮೂಲಗಳನ್ನು ವ್ಯರ್ಥವಾಗಿ ಬಳಸುವಂತೆ ಮಾಡಿದ ಕಾರಣ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಸುಮಾರು 6.2 ಲಕ್ಷ‌ ರೂಪಾಯಿವರೆಗೆ ದಂಡ ವಿಧಿಸಲಾಗಿದೆ.‌ 

ಲಿನ್ ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಿಕೊಳ್ಳದೆ, ತಮ್ಮ ಮೇಲಿರುವ ಎರಡೂ ಆರೋಪಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 10ರಂದು ನಡೆಯಲಿದೆ.

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST