ಬಾಗೇಪಲ್ಲಿ : ತಾಲ್ಲೂಕಿನಲ್ಲಿ ಸುಮಾರು 35 ವರ್ಷಗಳಿಂದ ಬಡಜನರ ಸೇವೆಯನ್ನು ಮಾಡುತ್ತಿರುವ ನಾನು ಶಾಸಕನಾದರೇ ಎಲ್ಲಾ ಬಡಜನರಿಗೆ,ಕಾರ್ಮಿಕರಿಗೆ ನಿವೇಶನಗಳನ್ನು ಹಂಚುತ್ತೆನೆ ಎಂದು ಸಮಾಜಸೇವಕ ಡಿ.ಜೆ.ನಾಗರಾಜರೆಡ್ಡಿ ರವರು ಅಭಿಪ್ರಾಯಪಟ್ಟರು. ಪಟ್ಟಣದ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(ರೆಡ್ ಪ್ಲಾಗ್ )ವತಿಯಿಂದ ಕನಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಮೇ ದಿನಾಚರಣೆ ಪ್ರಯುಕ್ತ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಸಮಾಜಸೇವಕ ಡಿ.ಜೆ.ನಾಗರಾಜರೆಡ್ಡಿರವರು ಮಾತನಾಡಿ, ಕಾರ್ಮಿಕರ ಪರವಾಗಿ ಮಾಡುವ ಎಲ್ಲಾ ಹೋರಾಟಗಳಿಗೂ ನಾನು ಸಹಕಾರ ನೀಡುತ್ತೆನೆ. ಈಗಾಗಲೇ ರೆಡ್ ಪ್ಲಾಗ್ ವತಿಯಿಂದ ನಿವೇಶನಗಳಿಗಾಗಿ ಸತತ ಹೋರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಶಾಸಕನಾದರೇ ಮೊದಲಿಗೆ ಎಲ್ಲಾ ಕಾರ್ಮಿಕರಿಗೂ, ಬಡವರಿಗೆ ನಿವೇಶನಗಳನ್ನು ನೀಡುವ ಕೆಲಸವನ್ನು ಮಾಡುತ್ತೆನೆ. ಮುಂದಿನ ದಿನಗಳಲ್ಲಿ ರೆಡ್ ಪ್ಲ್ಯಾಗ್ ವತಿಯಿಂದ ಸಾವಿರಾರು ಜನರ ಸಭೆಯನ್ನು ಏರ್ಪಡಿಸಿ, ಅವರು ನನ್ನನ್ನು ಬಾಗೇಪಲ್ಲಿ ತಾಲ್ಲೂಕು ಶಾಸಕನ್ನಾಗಿ ಆಯ್ಕೆಯಾಗಲು ಬೆಂಬಲಿಸುವಂತೆ ಕೋರಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ತಾಲ್ಲೂಕು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ( ರೆಡ್ ಪ್ಲ್ಯಾಗ್ )ವತಿಯಿಂದ, ಸಮಾಜಸೇವಕ ಡಿ.ಜೆ.ನಾಗರಾಜರೆಡ್ಡಿರವರಿಗರ ಬೆಂಬಲವನ್ನು ನೀಡಲಾಗುವುದೆಂದು ಘೋಷಣೆ ಮಾಡಲಾಯಿತು.
ವರದಿ: ಬಿ.ಎ.ಬಾಬಾಜಾನ್

