Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾಯುವ  ಅಧ್ಯಕ್ಷ ಸ್ಥಾನ ಅಶೋಕ್ ನಾಯ್ಕ ವಜಾ ಹಿಂತೆಗೆಯಲು ಆಗ್ರಹ

Advertisement

 ವಿಜಯನಗರ : ಜಿಲ್ಲೆ    ಯುವಜನರನ್ನು ಕುಗ್ಗಿಸುವ ಕೆಲಸ ಕೈ ಬಿಡಿ ಯುವ ಕಾಂಗ್ರೆಸ್ ಪಧಾಧಿಕಾರಿಗಳ ಒತ್ತಾಯ ಹಗರಿಬೊಮ್ಮನಹಳ್ಳಿ ಅಶೋಕ್ ಬಿ.ನಾಯ್ಕ ವಜಾ ಪ್ರಕರಣದಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಳ ರಾಜಕೀಯದ ಕಹಿ ಮುಖವಾಡ ಬಯಲಾಗಿದ್ದು, ಪಿತೂರಿಕೋರರ ಮಾತಿಗೆ ಮನ್ನಣೆ ನೀಡದೆ ಕೂಡಲೆ ವಜಾ ಹಿಂತೆಗೆಯಬೇಕು ಎಂದು ಪಕ್ಷದ ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಾಧ್ಯಕ್ಷ ಪ್ರೇಮಕುಮಾರ್, ಯುವ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೂಳಿ ಶರತ್ ಕುಮಾರ್, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯಕುಮಾರ್ ಸಿಡಿಮಿಡಿಗೊಂಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಅಶೋಕ್ ಬಿ.ನಾಯ್ಕ ಪ್ರಕರಣದಿಂದಾಗಿ ಕಾಂಗ್ರೆಸ್‌ನಲ್ಲಿ ಕೇವಲ ಕಿವಿಕಚ್ಚುವ ಮತ್ತು ತಪ್ಪು ಮಾಹಿತಿ ನೀಡುವ ಪಕ್ಷದ್ರೋಹಿಗಳಿಗೆ ಮುಕ್ತ ವೇದಿಕೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅಶೋಕ್ ಈಗಾಗಲೆ ಕಳೆದ ಹಲವು ವರ್ಷಗಳಿಂದಲೂ ಯುವಜನರಿಗೆ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದಾರೆ. ಕಳೆದ ಬಾರಿ ಪಿಯುಸಿ ಪ್ರಶ್ನೋತ್ತರ ಪುಸ್ತಕಗಳನ್ನು ಒದಗಿಸುವ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಸಹಕಾರಿಯಾಗಿದ್ದರು. ನೂರಾರು ಯುವಕರಿಗೆ ವೈಯಕ್ತಿಕ ಪ್ರೋತ್ಸಾಹಧನ, ಕೆಲವರಿಗೆ ಕ್ರೀಡಾಸಾಮಾಗ್ರಿ ವಿತರಣೆ, ರಕ್ತದಾನ ಶಿಬಿರ ಸೇರಿ ನಾನಾ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನಾನಾ ತಾಲೂಕುಗಳಲ್ಲಿ ಸಭೆ ನಡೆಸಿ ಯುವಕರಿಗೆ ಪಕ್ಷದ ತತ್ವಸಿದ್ಧಾಂತ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಕುರಿತಂತೆ ಪ್ರೇರಣೆ ನೀಡಿದ್ದಾರೆ. ಇದೀಗ ಪಕ್ಷದ್ರೋಹಿಗಳ ಷಡ್ಯಂತ್ರದಿAದಾಗಿ ವಜಾಗೊಳಿಸಿರುವುದು ಯುವಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಈ ನಿರ್ಧಾರವು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ಒಳರಾಜಕೀಯದ ಕ್ರೂರ ಆಟದ ಫಲಿತಾಂಶವೆAಬ ಅನುಮಾನ ಗಟ್ಟಿಯಾಗಿ ವ್ಯಕ್ತವಾಗುತ್ತಿದೆ.

ನಿಷ್ಠಾವಂತರ ಗುರಿ, ಯುವಜನರಿಗೆ ಘಾಸಿ : ಸಣ್ಣ ಕಾರಣ ತೋರಿ ವಜಾಗೊಳಿಸಿರುವುದು ಅಕ್ಷರಶಃ ಯುವಜನರ ಮೇಲೆ ನಡೆದ ಪಿತೂರಿಕೋರರ ರಾಜಕೀಯ ದಾಳಿಯಾಗಿದೆ. ಅಶೋಕ್ ಬಿ.ನಾಯ್ಕ ಅವರು ವಿಜಯನಗರ ಭಾಗದಲ್ಲಿ ಯುವಕರನ್ನು ಸಂಘಟಿಸಿ, ಕಾಂಗ್ರೆಸ್ ಯುವಪಡೆಯನ್ನು ಶಕ್ತಿಶಾಲಿಯಾಗಿ ರೂಪಿಸಿದವ ಅಶೋಕ್ ಬಿ.ನಾಯ್ಕ ಅವರ ವಜಾ ಕೈಬಿಡಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಮಿತಿ ನಾನಾ ಘಟಕದ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಎಚ್ಚರಿಸಿದರು.          

ವರದಿ :  ಎಂ ಮಂಜುನಾಥ್

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೇವಗೊಂಡ ಮೈದಾನ: ಆರ್‌ಸಿಬಿ ಪಂದ್ಯ ವಿಳಂಭ ಮೊದಲ ಟೆಸ್ಟ್ಗೆ ಇಂಗ್ಲೆAಡ್ ತಂಡದಾಯ್ಕೆಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿಹಿಜಾಬ್ ನಿಷೇಧ ವಾಪಸ್ ಪಡೆದ ರಾಜ್ಯ ಸರ್ಕಾರ ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು : ಬಿ. ಕೆ ಹರಿಪ್ರಸಾದ್ ಮಣ್ಣಲ್ಲಿ ಮಣ್ಣಾದ ನಟ ದಿಲೀಪ್ ರಾಜ್ : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ, ವಾಹನ ಬಳಕೆ ಶೇ. 40 ರಷ್ಟು ಕಡಿತ : ಆರ್. ಅಶೋಕ್ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯ :ವಸಂತ ಎಸ್ಚರಂಡಿ ಸ್ವಚ್ಛಗೊಳಿಸಿ, ರೋಗಭಯವಿಲ್ಲದೆ ಬದುಕುವಂತೆ ಮಾಡಿ : ನಾಗರೀಕರ ಆಗ್ರಹ