LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸಿಎಂ ಕುರ್ಚಿ ಬಿಟ್ಟು ಸಿದ್ದರಾಮಯ್ಯ ಜತೆ ಲಾಸ್ಟ್ ಬೆಂಚ್ ನಲ್ಲಿ ಕುಳಿದ ಡಿಕೆಶಿ : ಸದನದಲ್ಲೊಂದು ಅಪರೂಪದ ಸನ್ನಿವೇಶ

Advertisement

ಬೆಂಗಳೂರು: ಸಚಿವ ಬಿ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ- ಜೆಡಿಎಸ್ ಗದ್ದಲದ ನಡುವೆಯೂ ವಿಧಾನಸಭೆ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಯಿತು. ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸಿಎಂ ಆಸನದಲ್ಲಿ ಡಿಕೆ ಶಿವಕುಮಾರ್ ಇದ್ದಾರೆ.

ಕೆಲವು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿ ಎರಡನೇ ಅವಧಿಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಕೊನೆಯ ಸಾಲಿನಲ್ಲಿ ಕುಳಿತಿದ್ದಾರೆ.

ರಾಜಕೀಯವಾಗಿ ನಡೆದ ಈ ಮಹತ್ವದ ಬದಲಾವಣೆಯ ನಡುವೆಯೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಆಡಳಿತ ಪಕ್ಷದ ಸದಸ್ಯರ ಕೊನೆಯ ಆಸನದಲ್ಲಿ ಸಿದ್ದರಾಮಯ್ಯ ಜೊತೆಗೆ ಕುಳಿತುಕೊಳ್ಳುವ ಮೂಲಕ ಗಮನ ಸೆಳೆದರು.

ಶುಕ್ರವಾರ ವಿಧಾನಸಭೆಯಲ್ಲಿ ವಾಲ್ಮೀಕಿ ಹಗರಣದ ಕುರಿತಾಗಿ ವಿಪಕ್ಷಗಳು ಗದ್ದಲ ಉಂಟು ಮಾಡಿದ್ದವು. ವಿಪಕ್ಷದ ಸದಸ್ಯರು ಸದನಕ್ಕೆ ಕಪ್ಪು ಬಣ್ಣದ ಟಿಶರ್ಟ್ ಧರಿಸಿಕೊಂಡು ಬಂದಿದ್ದರು. ಬಳಿಕ ಸ್ಪೀಕರ್ ಮನವೋಲಿಕೆಯ ಹಿನ್ನೆಲೆಯಲ್ಲಿ ಟಿ ಶರ್ಟ್ ಕಳಚಿಟ್ಟು ಸದನದಕ್ಕೆ ಆಗಮಿಸಿದರು.

ವಿಪಕ್ಷದ ಸದಸ್ಯರು ಸದನಕ್ಕೆ ಕಪ್ಪು ಬಣ್ಣದ ಟಿಶರ್ಟ್ ಧರಿಸಿಕೊಂಡು ಬಂದಿದ್ದರು. ಬಳಿಕ ಸ್ಪೀಕರ್ ಮನವೋಲಿಕೆಯ ಹಿನ್ನೆಲೆಯಲ್ಲಿ ಟಿ ಶರ್ಟ್ ಕಳಚಿಟ್ಟು ಸದನದಕ್ಕೆ ಆಗಮಿಸಿದರು.

ಆದರೂ ಚರ್ಚೆಗೆ ಅವಕಾಶ ಕೊಡದೆ ಪ್ರತಿಭಟನೆಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಸದನಕ್ಕೆ ಆಗಮಿಸಿದ್ದರು. ಸದನದಲ್ಲಿ ಎಂದಿನಂತೆ ಅವರು ಕೊನೆಯ ಸಾಲಿನಲ್ಲಿ ನಿಗದಿಯಾಗಿದ್ದ ಆಸನದಲ್ಲಿ ಕುಳಿತುಕೊಂಡಿದ್ದರು.

ವಿಧಾನಸಭೆಯಲ್ಲಿ ಸಿಎಂ ಅವರಿಗೆ ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ ಆಸನ ನಿಗದಿ ಆಗಿರುತ್ತದೆ. ಸಿಎಂ ತಮ್ಮ ಸ್ಥಾನವನ್ನು ಬಿಟ್ಟು ಬೇರೆ ಸೀಟ್ ನಲ್ಲಿ ಕುಳಿತುಕೊಳ್ಳುವ ಪರಿಪಾಠ ಕಡಿಮೆ. ಎಲ್ಲಾ ಶಾಸಕರು, ಸಚಿವರು ಸಿಎಂ ಕುಳಿತಲ್ಲಿಗೆ ಬಂದು ಮಾತುಕತೆ ನಡೆಸುತ್ತಾರೆ. 

ಆದರೆ ಶುಕ್ರವಾರ ಇದಕ್ಕೆ ಭಿನ್ನವಾದ ವಾತಾವರಣ ಕಂಡು ಬಂತು. ಸ್ವತಃ ಸಿಎಂ ಅವರು ಸಿದ್ದರಾಮಯ್ಯ ಕುಳಿತ ಆಸನದತ್ತ ತೆರಳಿ ಅವರ ಪಕ್ಕದಲ್ಲೇ ಕುಳಿತುಕೊಂಡರು. ಉಭಯ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST