LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಿವಿಯೊಳಗೆ ಇಯರ್ ಬಡ್ಸ್ ಹಾಕುವ ಮುನ್ನ ಎಚ್ಚರ, ಈ ಬಡ್ಸ್ ಯಾಕೆ ಬಳಸುತ್ತಾರೆ ಗೊತ್ತಾ?

Advertisement
ಇಯರ್ ಬಡ್ಸ್ ಅಥವಾ ಕಾಟನ್ ಬಡ್ಸ್​ಗಳನ್ನು ಕಿವಿಗೆ ಹಾಕುವುದರಿಂದ ಯಾವೆಲ್ಲ ಸಮಸ್ಯೆಗಳು ಬರುತ್ತದೆ ಗೊತ್ತಾ? ಈ ಬಗ್ಗೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಪ್ರಾಧ್ಯಾಪಕ ಮತ್ತು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮೆಹರ್ ಅವರು ಕೆಲವೊಂದು ಮಾಹಿತಿಯನ್ನು ಹಾಗೂ ಸಲಹೆಗಳನ್ನು ನೀಡಿದ್ದಾರೆ. ಇದರ ಜತೆಗೆ ಈ ಇಯರ್ ಬಡ್ಸ್ ನ್ನು ಯಾವ ಕಾರಣಕ್ಕೆ ಬಳಸುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.

ಇಯರ್ ಬಡ್ಸ್ (Earbuds) ಅಥವಾ ಕಾಟನ್ ಬಡ್ಸ್ ಬಳಸುವಾಗ ತುಂಬಾ ಎಚ್ಚರದಿಂದಿರಬೇಕು. ಇದರಿಂದ ಕಿವಿಗೆ ದೊಡ್ಡಮಟ್ಟ ಪೆಟ್ಟು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಪ್ರಾಧ್ಯಾಪಕ ಮತ್ತು ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವಿ ಮೆಹರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಾಲ ಕಾಲಕ್ಕೆ ಕಿವಿಯನ್ನು ಸ್ವಚ್ಛಗೊಳಿಸುತ್ತಿರಬೇಕು ಒಂದು ವೇಳೆ ಸಚ್ಛ ಮಾಡಿಲ್ಲ ಎಂದರೆ ಕಿವಿ ಅಸ್ಪಷ್ಟವಾಗಿ ಕೇಳುತ್ತದೆ, ಸೋಂಕು ಕೂಡ ಹರಡಬಹುದು. ಅದಕ್ಕಾಗಿ ಅನೇಕ ಜನರು ಕಿವಿಗಳಲ್ಲಿ ಸಂಗ್ರಹವಾದ ಇಯರ್‌ವಾಕ್ಸ್​​​​ನ್ನು ಸ್ವಚ್ಛಗೊಳಿಸಲು, ಕೊಳೆ ತೆಗೆಯಲು ಹತ್ತಿ ಬಡ್ಸ್ ಉಪಯೋಗಿಸುತ್ತಾರೆ. ಆದರೆ ಇದು ಕಿವಿಗಳಿಗೆ ಹಾನಿ ಮಾಡುತ್ತದೆ ಎಂದು ಡಾ. ರವಿ ಮೆಹರ್ ಹೇಳುತ್ತಾರೆ. ಹೆಚ್ಚಿನ ಜನರಿಗೆ ಹತ್ತಿ ಬಡ್ಸ್‌ನಿಂದ ಕಿವಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕು, ಇದನ್ನು ಹೇಗೆ ಕಿವಿಗೆ ಹಾಕಬೇಕು ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕಿವಿಗೆ ಇಯರ್‌ಬಡ್‌ ಯಾಕೆ ಹಾಕಬಾರದು?
ಕಿವಿಗಳಿಗೆ ಹತ್ತಿ ಇಯರ್‌ಬಡ್‌ ಬಳಸುವುದು 3 ವಿಧಗಳಲ್ಲಿ ಹಾನಿಕಾರಕ:
ಕಿವಿಗೆ ಹತ್ತಿ ಇಯರ್‌ಬಡ್‌ ಹಾಕಿ ಸ್ವಚ್ಛ ಮಾಡಿದ್ರೆ, ಹೆಚ್ಚಿನ ಇಯರ್‌ವಾಕ್ಸ್ ಅಥವಾ ಕೊಳಕು ಕ್ರಿಮಿಗಳು ಅಥವಾ ಕಸಗಳು ಕಿವಿಗೆ ಪ್ರವೇಶಿಸಬಹುದು. ಇದು ಅಡಚಣೆ, ಶ್ರವಣ ದೋಷ ಸಮಸ್ಯೆಗಳನ್ನು ಉಂಟುಮಾಡಬಹುದು.
ಕಿವಿಯಲ್ಲಿ ಕಾಲುವೆ ರೀತಿಯಲ್ಲಿರುವ ಭಾಗದಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು. ಹತ್ತಿಯ ಇಯರ್‌ಬಡ್‌ ಕಿವಿಯ ಸೂಕ್ಷ್ಮ ಚರ್ಮಕ್ಕೆ ಹಾನಿ ಮಾಡಬಹುದು. ಇದು ನೋವನ್ನು ಉಂಟುಮಾಡುತ್ತದೆ ಮತ್ತು ಸೋಂಕಿಗೆ ಕಾರಣವಾಗಬಹುದು.
ಹತ್ತಿಯ ಇಯರ್‌ಬಡ್​​ನ್ನು ಒತ್ತಡಪೂರ್ವಕವಾಗಿ ಕಿವಿಯ ಒಳಗೆ ಹಾಕಿದ್ರೆ ಕಿವಿಯ ಟಮಟೆ ಒಡೆದು ಹೋಗುವ ಸಾಧ್ಯತೆ ಇದೆ.

ಕಿವಿಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ಕಿವಿಗಳು ನೈಸರ್ಗಿಕವಾಗಿ ಸ್ವಚ್ಛವಾಗಬೇಕೆಂದು ವೈದ್ಯರ ಈ ಸಲಹೆ ಕೇಳಿ, ಕಿವಿಗೆ ಹನಿ ಹನಿ ನೀರು ಹಾಕಿ ಕಿವಿಯ ಮೇಣವನ್ನು ಮೃದುಗೊಳಿಸಬಹುದು, ಇದರಿಂದ ಕಿವಿಯಲ್ಲಿರುವ ಕಸಗಳು ತಾನಾಗಿಯೇ ಹೊರಬರುತ್ತದೆ. ಕಿವಿಯಲ್ಲಿ ಬಹಳಷ್ಟು ಕೊಳಕು ಇದ್ದರೆ, ನೀವು ಕಿವಿಯ ತಜ್ಞರ ಬಳಿ ಹೋಗಿ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಬಹುದು.

ಹತ್ತಿ ಇಯರ್‌ಬಡ್‌ ಬಳಸುವ ಸರಿಯಾದ ವಿಧಾನ ಯಾವುದು?
ಈ ಹತ್ತಿ ಇಯರ್‌ಬಡ್​​ಗಳನ್ನು ಕಿವಿಯ ಒಳಗೆ ಸ್ವಚ್ಛ ಮಾಡಲು ಅಲ್ಲ ತಯಾರಿಸಿರುವುದು. ಕಿವಿ ಹೊರಗೆ ಸಂಗ್ರಹವಾಗಿರುವ ಕೊಳಕುಗಳನ್ನು ತೆಗೆಯಲು ಈ ಹತ್ತಿ ಇಯರ್‌ಬಡ್​​​ ಮಾಡಿರುವುದು. ಕಿವಿಯ ಹೊರ ಆಕಾರವು ತುಂಬಾ ವಕ್ರವಾಗಿರುತ್ತದೆ ಮತ್ತು ಅದಕ್ಕಾಗಿಯೇ ಹತ್ತಿ ಇಯರ್‌ಬಡ್​​ನ್ನು ಕಿವಿಯ ಹೊರ ಭಾಗವನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ