ದೂಲಾಲ್ ಗಿರಿ ಜಿ ಮಹಾರಾಜ್ ಎಂಬ ಹಿಂದೂ ತಪಸ್ವಿ (ನಾಗಾ ಸಾಧು / ಖರೇಶ್ವರಿ) ಕಳೆದ 12 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ. ಭಗವಂತನ ಸಾಕ್ಷಾತ್ಕಾರ ಅಥವಾ ದೇವರನ್ನು ನೋಡಬೇಕು ಎನ್ನುವ ಕಾರಣಕ್ಕೆ ನಿಂತಿದ್ದಾರಂತೆ.
ಭಗವಾನ್ ಶಿವನ ದರ್ಶನವನ್ನು ಪಡೆಯಬೇಕು ಎಂದು ಸುಮಾರು 12 ವರ್ಷಗಳ ಕಾಲ ಎಂದಿಗೂ ಕುಳಿತುಕೊಂಡಿಲ್ಲ, ಮಲಗಿಲ್ಲ.ಈ ಮೂಲಕ ಕಠಿಣ ತಪಸ್ಸು ಮಾಡಿದ್ದಾರೆ. ಇದೊಂದು ತರ ಜೀವಿತಾವಧಿ ವ್ರತ ಆಗಿದೆ.
ತಪಸ್ಸಿನ ಜೀವನ ಮಾಡಬೇಕು ಎಂದು ಅವರು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರು. ಇವರು ಎಂದಿಗೂ ನೆಲದ ಮೇಲೆ ಕುಳಿತುಕೊಳ್ಳುವುದಿಲ್ಲ ಅಥವಾ ಮಲಗುವುದಿಲ್ಲ. ಇತ್ತೀಚೆಗೆ ಸಪೋರ್ಟ್ ಕೊಡುವ ರೀತಿಯಲ್ಲಿ ತೂಗಾಡುವ ಬೆಲ್ಟ್ ಬಳಸಿ ವಿಶ್ರಾಂತಿ ಪಡೆಯುತ್ತಾರೆ.


