ಬೆಳಗಾವಿ: ಜಿಲ್ಲೆ ರಾಮದುರ್ಗ ಪಟ್ಟಣದ ರಾಮದುರ್ಗ ಪೊಲೀಸ್ ಠಾಣೆ ಆವರಣದಲ್ಲಿ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ CEIR ಪೋರ್ಟಲ್ ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ, ಅವುಗಳ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ತಂತ್ರಜ್ಞಾನದ ನೆರವಿನಿಂದ ಈ ಮೊಬೈಲ್ಗಳನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡಿ, ಮರಳಿ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.CEIR ಪೋರ್ಟಲ್ ಈಗ ಅಟೋ ಜನರೇಟಾಗಿ ನಮಗೆ ಈ ಮೊಬೈಲ್ ಒಳಗೆ ಇಂತಹ ನಂಬರ್ ಇದೆ ಎಂದು ತೋರಿಸುತ್ತದೆ . ಈ ಮೊಬೈಲ್ ಕಳ್ಳತನ ಮಾಡಿದವರು ಯಾರಿಗೋ ಸಾವಿರ ಎರಡು ಸಾವಿರ ರೂಪಾಯಿ ಕೊಡುವಂಥ ಸಂದರ್ಭ ಇದೆ ಕಳ್ಳತನ ಮಾಡಿದ ಮೊಬೈಲ್ ಅವರು ಉಪಯೋಗ ಮಾಡುವುದಿಲ್ಲ.
ಆಟೋಮೆಟಿಕ್ ಆಗಿ ಒಂದು ಸಿಮ್ ಇನ್ಸರ್ಟ್ ಮಾಡ್ಬಿಟ್ರೆ ಮುಗಿದು ಹೋಯಿತು. 10000 ಮೊಬೈಲನ್ನು 2 ಸಾವಿರ ರೂಪಾಯಿಗೆ ಕೊಡುತ್ತಾರೆ ಅಂದ್ರೆ ಯಾರೋ ತೆಗೆದುಕೊಂಡು ಬಿಡುತ್ತಾರೆ.ಕೇಂದ್ರ ಸರ್ಕಾರದ CEIR (Central Equipment Identity Register) ಪೋರ್ಟಲ್ ಮೂಲಕ ಮೊಬೈಲ್ ಪತ್ತೆ. ಕಳೆದುಹೋದ/ಕಳುವಾದ ಹಲವು ದುಬಾರಿ ಸ್ಮಾರ್ಟ್ ಫೋನ್ ಗಳು .ದೂರು ದಾಖಲಿಸಿದ ನಂತರ, IMEI ಸಂಖ್ಯೆ ಮೂಲಕ ಮೊಬೈಲ್ ಟ್ರ್ಯಾಕ್ ಮಾಡಲಾಗಿದೆ.
ಪತ್ತೆಯಾದ 51 ಮೊಬೈಲ್ಗಳನ್ನು ಅಸಲಿ ಮಾಲೀಕರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು .ಪೊಲೀಸ್ ರು ಈ ಕಾರ್ಯ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹೆಚ್ಚಿಸಿದ್ದು, ತಂತ್ರಜ್ಞಾನದ ಸಮರ್ಪಕ ಬಳಕೆಯ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಿರುವ ಪೊಲೀಸರು, ಮೊಬೈಲ್ ಕಳೆದುಹೋದ ಸಂದರ್ಭದಲ್ಲಿ ತಕ್ಷಣವೇ ಸಂಬಂಧಿಸಿದ ದಾಖಲಾತಿಗಳು ಮತ್ತು ಗುರುತಿನ ಪುರಾವೆಗಳೊಂದಿಗೆ KSP ಮೊಬೈಲ್ ಆಪ್ ಮೂಲಕ ದೂರು ದಾಖಲಿಸಿ, ನಂತರ CEIR ವೆಬ್ ಪೋರ್ಟಲ್ https://www.ceir.gov.in ನಲ್ಲಿ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.ಇದರಿಂದ ಕಳೆದುಹೋದ ಮೊಬೈಲ್ಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ರಾಮದುರ್ಗ ವೃತ್ತದ ಪೊಲೀಸ್ ನಿರೀಕ್ಷಕರು (ಸಿಪಿಐ) ವಿನಾಯಕ ಬಡಿಗೇರ, ರಾಮದುರ್ಗ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಸವಿತಾ ಮುನ್ಯಾಳ, ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.
ವರದಿ: ಮಂಜುನಾಥ್ ಕಲಾದಗಿ

