ಕೆ ಸುಂದರಿ. ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡು ಹತ್ತಾರು ಪಾತ್ರಗಳನ್ನು ನಿಭಾಯಿಸುತ್ತಾ ಒಂದು ನೆಲೆಯನ್ನು ಕಂಡುಕೊಂಡಾಕೆ. ಆಕೆಯ ಜೀವನದಲ್ಲಿ ನೇಮ್ - ಫೇಮ್ ಎಲ್ಲವೂ ಇತ್ತು. ಆದರೆ 60ರ ವಯಸ್ಸಿನವರೆಗೂ ಅವರು ಒಂಟಿಯಾಗಿಯೇ ಇದ್ದರು.
26ರ ವಯಸ್ಸಿನಲ್ಲಿ ತಾಯಿ ʼಮದುವೆಯಾಗು ಮಗಳೇʼ ಎಂದು ಹೇಳಿದಾಗ ಈಗ ಬೇಡವೆಂದು ಹೇಳಿ ಸುಮ್ಮನಾದರು.ಆದರೆ ಆ ಬೇಡ ಎನ್ನುವ ಮಾತನ್ನು ಅವರು 60ರ ವಯಸ್ಸಿನವರೆಗೂ ಮುಂದುವೆರಸಿದ್ದರು.
ಇನ್ನೇನು ಜೀವನ ಒಂಟಿಯಾಗಿಯೇ ಕಳೆಯುತ್ತೇನೆ ಎಂದುಕೊಂಡಿದ್ದಾಕೆಗೆ ಅದೊಂದು ಸಂದರ್ಭ ಪ್ರೀತಿಯ ಹೊಸ ಬಂಧವನ್ನು ಹುಟ್ಟುವಂತೆ ಮಾಡಿತು.
ಇದು 60ರ ವಯಸ್ಸಿನಲ್ಲಿ ಪ್ರೀತಿ ಕಂಡುಕೊಂಡು ದಾಂಪತ್ಯ ಜೀವನಕ್ಕೇರಿದ ಖ್ಯಾತ ನಟಿಯೊಬ್ಬರ ರಿಯಲ್ ಲವ್ ಸ್ಟೋರಿಯಿದು.
ನಟಿ ಸುಹಾಸಿನಿ ಮುಲಾಯ್ (Suhasini Mulay) 'ಲಗಾನ್' ಮತ್ತು 'ಜೋಧಾ ಅಕ್ಬರ್'ನಂತಹ ಸಿನಿಮಾಗಳಲ್ಲಿ ನಟಿಸಿ, ಖ್ಯಾತ ನಿರ್ದೇಶಕರ ಜತೆ ಕೆಲಸ ಮಾಡಿದವರು.
ಸುಹಾಸಿನಿ ಮುಲಾಯ್ ತಮ್ಮ 60ನೇ ವಯಸ್ಸಿನಲ್ಲಿ, ಫೇಸ್‌ಬುಕ್ ಮೂಲಕ ಪರಿಚಯವಾದ ವಿಜ್ಞಾನಿಯೊಬ್ಬರಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಂಡು, ಆ ವಯಸ್ಸಿನಲ್ಲೇ ಮದುವೆಯಾದರು.
ಸುಹಾಸಿನಿ ಮುಲಾಯ್ ಅವರು ಅತುಲ್ ಗುರ್ತು ಅವರನ್ನು ಮದುವೆಯಾಗಿ 15 ವರ್ಷಗಳು ಕಳೆದಿದೆ. ಅವರ 60ರ ಹರೆಯದ ಪ್ರೇಮ ಕಥೆಯ ಬಗ್ಗೆ ನಟಿ ಇತ್ತೀಚೆಗೆ ಮುಕ್ತವಾಗಿ ಮಾತನಾಡಿದ್ದಾರೆ.
'ಸುಹಾನಾ ಸಫರ್' ಕಾರ್ಯಕ್ರಮದಲ್ಲಿ ಸಮಾನತೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳುವ ಪುರುಷ ಸಿಗದ ಕಾರಣ ತಾವು ಇಷ್ಟು ವರ್ಷಗಳ ಕಾಲ ಮದುವೆಯಾಗದೆ ಉಳಿದಿದ್ದಾಗಿ ನಟಿ ಹೇಳಿದ್ದಾರೆ.
ಅಲ್ಲದೆ, ಹೆಚ್ಚು ಧಾರ್ಮಿಕವಾಗಿರದ ಮತ್ತು ಇತರರ ವಿಭಿನ್ನ ಜೀವನಶೈಲಿಯ ಬಗ್ಗೆ ಸುಲಭವಾಗಿ ತೀರ್ಪು ನೀಡದ (judgemental) ವ್ಯಕ್ತಿಯನ್ನು ತಾನು ಹುಡುಕುತ್ತಿದ್ದೆ ಅವರು ಬಹಿರಂಗಪಡಿಸಿದ್ದಾರೆ.
'ಸುಹಾನಾ ಸಫರ್' ಕಾರ್ಯಕ್ರಮದಲ್ಲಿ ಮಾತನಾಡಿದ ಸುಹಾಸಿನಿ, "ನಾನು ನನ್ನ 60ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿವಾಹವಾದೆ. ಅಲ್ಲಿಯವರೆಗೆ ನನಗೆ ಸೂಕ್ತವಾದ ಜೋಡಿ ಸಿಕ್ಕಿರಲಿಲ್ಲ. ನನ್ನ ಪತಿ ತುಂಬಾ ಪ್ರಸಿದ್ಧ ವಿಜ್ಞಾನಿ. ಅವರು ವಿಜ್ಞಾನದ ಬಗ್ಗೆ ಮಾತನಾಡುವಾಗ ನನಗೆ ಏನೂ ಅರ್ಥವಾಗುವುದಿಲ್ಲ, ಆದರೆ ಅವರು ಅದ್ಭುತ ಮನುಷ್ಯ," ಎಂದು ಹೇಳಿದ್ದಾರೆ.
ಈ ಪ್ರೇಮಕಥೆ ನೀವು ಊಹಿಸುವುದಕ್ಕಿಂತಲೂ ಹೆಚ್ಚು ಆಸಕ್ತಿದಾಯಕವಾಗಿದೆ. ನಟಿ ಸುಲೇಖಾ ತಲ್ವಾಲ್ಕರ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸುಹಾಸಿನಿ ಈ ಬಗ್ಗೆ ಮಾತನಾಡುತ್ತಾ, ಸಹ-ಕಲಾವಿದರೊಬ್ಬರ ಒತ್ತಾಯದ ಮೇರೆಗೆ ತಾವು ಕೆಲಸದ ಅವಕಾಶಗಳನ್ನು ಹುಡುಕಲು ಫೇಸ್‌ಬುಕ್ ಸೇರಿದ್ದಾಗಿ ತಿಳಿಸಿದ್ದಾರೆ. ಆದರೆ, ಅಲ್ಲಿ ಅವರ ಗಮನ ಸೆಳೆದದ್ದು ಒಂದು ವಿಶಿಷ್ಟ ಪ್ರೊಫೈಲ್ ಸಜೆಷನ್!
ಫೇಸ್‌ಬುಕ್‌ನಲ್ಲಿ ಪರಿಚಯ 75 ದಿನದಲ್ಲೇ ಮದುವೆ.!:
"ನಾನು ಅತುಲ್ ಅವರ ಪ್ರೊಫೈಲ್ ನೋಡಿ, 'ಫೇಸ್‌ಬುಕ್‌ನಲ್ಲಿ ಭೌತವಿಜ್ಞಾನಿಗಳೂ ಇದ್ದಾರಾ?' ಎಂದು ಯೋಚಿಸಿದೆ. ಅವರು ಲಾರ್ಜ್ ಹ್ಯಾಡ್ರಾನ್ ಕೊಲೈಡರ್ (LHC) ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು.
ನನಗೆ ಮೊದಲಿನಿಂದಲೂ ವಿಜ್ಞಾನದಲ್ಲಿ ಆಸಕ್ತಿ ಇದ್ದುದರಿಂದ, 'LHC ಎಂದರೆ ಏನು?' ಎಂದು ಅವರಿಗೆ ಸಂದೇಶ ಕಳುಹಿಸಿದೆ," ಎಂದು ಸುಹಾಸಿನಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


