ಬಾಗಲಕೋಟೆ : ಪ್ರತಿ ವರ್ಷದಂತೆ ಶ್ರಾವಣ ಮಾಸದ ನಾಲ್ಕನೇಯ ಸೋಮವಾರ ಜರುಗುವ ಬೀಳಗಿಯ ಆರಾಧ್ಯದೈವ ಸಿದ್ಧೇಶ್ವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ– ಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದಲ್ಲಿ ನೇಕಾರ ಸಮಾಜದವರಿಂದ ರಥೋತ್ಸವದ ಕಳಸಕ್ಕೆ ವಿಶೇಷ ಪೂಜೆ ನೆರವೇರಿದ ನಂತರ ಮೆರವಣಿಗೆ ಪ್ರಾರಂಭವಾಯಿತು ಕರಡಿ ಮಜಲು ತಾಳಗಳ ಮೇಳದಲ್ಲಿ ಜೈಕಾರದೊಂದಿಗೆ ಭಕ್ತರ ಪರಾಕಷ್ಟೆ ಮುಗಿಲು ಮುಟ್ಟಿತು ಜಾತ್ರೆಯ ನಿಮಿತ್ತ ಸಿದ್ದೇಶ್ವರ ಮೂರ್ತಿಯ ವಿಶೇಷ ಅಲಂಕಾರ ಪೂಜೆ ಹಾಗು ರುದ್ರಾಭಿಷೇಕವನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು.
ಜಾತ್ರೆ ಅಂಗವಾಗಿ ಭವ್ಯ ರಥೋತ್ಸವ ನಡೆಯಿತು ನಂದಿಕೋಲು, ಕಳಸ ಹಾಗೂ ಪಲ್ಲಕಿ ಉತ್ಸವ ಜರುಗಿದವು ರಥೋತ್ಸವಕ್ಕೆ ಭಕ್ತರು ಬೆಂಡು, ಬೆತ್ತಾಸು, ಖಾರೀಕ್ ಹಾರಿಸಿ ಹರಕೆ ತೀರಿಸಿ ದರ್ಶನ ಪಡೆದುಕೊಂಡರು
ಸಿಡಿಮದ್ದುಗಳ ಚಿತ್ತಾರ ಜಾತ್ರೆಯನ್ನು ಕಳೆಗಟ್ಟಿಸಿತು ಮೆರವಣಿಗೆಯುದ್ದಕ್ಕೂಸಾರವಾಡದ ಗೊಂಬೆ ಕುಣಿತ, ಕರಡಿ ಮೇಳ ವಾದ್ಯಮೇಳಗಳ ನಾದ ಕೇಳಿಬಂತು ವಿವಿಧ ಜಿಲ್ಲೆ ಹಾಗೂ ತಾಲ್ಲೂಕಿನಿಂದ ಆಗಮಿಸಿದ ಭಕ್ತ ವೃಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ : ಬಸವರಾಜ ಪೂಜಾರಿ


