Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದಿನಿಂದ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದರೇ 250 ರೂ.ಬದಲು 500ರೂ. ದಂಡ

Advertisement

ನವದೆಹಲಿ : ರೈಲು ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ಭಾರತೀಯ ರೈಲ್ವೆ ಇಂದಿನಿಂದ ಕಠಿಣ ಎಚ್ಚರಿಕೆ ನೀಡಿದೆ. 

ಇನ್ನು ಮುಂದೆ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದರೆ ಕನಿಷ್ಠ 500 ದಂಡ ಪಾವತಿಸಬೇಕಾಗುತ್ತದೆ. ಈ ಮೊದಲು ಕನಿಷ್ಠ ದಂಡ ₹250 ಆಗಿದ್ದು, ಇದೀಗ ಅದನ್ನು ದ್ವಿಗುಣಗೊಳಿಸಲಾಗಿದೆ.

ಕೇಂದ್ರ ರೈಲ್ವೆ ಸಚಿವಾಲಯ ಜೂನ್ 19ರಂದು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಹೊಸ ನಿಯಮ ಜೂನ್ 20ರಿಂದ ಜಾರಿಗೆ ಬಂದಿದೆ. ಜನ ವಿಶ್ವಾಸ್ ಕಾಯ್ದೆ(Jan Vishwas Act, 2026) -2026ರ ಅಡಿಯಲ್ಲಿ ಈ ಬದಲಾವಣೆ ಜಾರಿಗೆ ತರಲಾಗಿದೆ.

 ಟಿಕೆಟ್ ರಹಿತ ಪ್ರಯಾಣವನ್ನು ತಡೆಗಟ್ಟುವುದು ಮತ್ತು ರೈಲುಗಳಲ್ಲಿ ಶಿಸ್ತು ಕಾಪಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಯಾವ ಸಂದರ್ಭಗಳಲ್ಲಿ ದಂಡ ವಿಧಿಸಲಾಗುತ್ತದೆ?

ರೈಲ್ವೆ ನಿಯಮಗಳ ಪ್ರಕಾರ, ಕೆಳಗಿನ ಸಂದರ್ಭಗಳಲ್ಲಿ ಪ್ರಯಾಣಿಕರು ದಂಡಕ್ಕೆ ಒಳಗಾಗಬಹುದು:

ಮಾನ್ಯವಾದ ಟಿಕೆಟ್ ಅಥವಾ ಪಾಸ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವುದು.

ಟಿಕೆಟ್ ಇಲ್ಲದೇ ಪ್ರಯಾಣಿಸಲು ಪ್ರಯತ್ನಿಸುವುದು.

ಈಗಾಗಲೇ ಬಳಸಿರುವ ಟಿಕೆಟ್ ಅಥವಾ ಪಾಸ್ ಅನ್ನು ಮತ್ತೊಮ್ಮೆ ಬಳಸುವುದು.

ಕ್ಯಾನ್ಸಲ್‌ ಆದ ಟಿಕೆಟ್‌ ರೀಫಂಡ್‌ ವೇಳೆ 5 ರೂ. ಕಡಿಮೆ ಪಾವತಿಸಿದ ರೈಲ್ವೆ: 10,000 ಪರಿಹಾರ ನೀಡಲು ಕೋರ್ಟ್ ಆದೇಶ

ಎಷ್ಟು ದಂಡ ಪಾವತಿಸಬೇಕು?

ನಿಯಮ ಉಲ್ಲಂಘನೆ ಮಾಡಿದ ಪ್ರಯಾಣಿಕರು ಎರಡು ರೀತಿಯಲ್ಲಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಅವರು ಪ್ರಯಾಣಿಸಿದ ದೂರಕ್ಕೆ ಅನ್ವಯವಾಗುವ ರೈಲು ಪ್ರಯಾಣ ದರ.

ಹೆಚ್ಚುವರಿ ದಂಡವಾಗಿ ಕನಿಷ್ಠ 500.

ಅಂದರೆ, ಕೇವಲ 500 ದಂಡ ಮಾತ್ರವಲ್ಲದೆ, ಪ್ರಯಾಣ ದರವನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ.

ದಂಡ ಪಾವತಿಸಲು ನಿರಾಕರಿಸಿದರೆ?

ಒಂದು ವೇಳೆ ಪ್ರಯಾಣಿಕರು ಸ್ಥಳದಲ್ಲೇ ದಂಡ ಮತ್ತು ಪ್ರಯಾಣ ದರ ಪಾವತಿಸಲು ನಿರಾಕರಿಸಿದರೆ, ರೈಲ್ವೆ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಬಹುದು. ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯವು ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ.

ರೈಲು ಪ್ರಯಾಣಿಕರಿಗಿನ್ನು ಒಂದೇ ಆಯಪ್: 'RailOne' ನಲ್ಲೇ ಸಿಗಲಿದೆ ಟಿಕೆಟ್‌ನಿಂದ PNR ವರೆಗಿನ ಎಲ್ಲಾ ಮಾಹಿತಿ

ನ್ಯಾಯಾಲಯವು ಪ್ರಕರಣದ ಆಧಾರದ ಮೇಲೆ,

ಗರಿಷ್ಠ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು,

ಅಥವಾ 500ವರೆಗೆ ಹೆಚ್ಚುವರಿ ದಂಡ ವಿಧಿಸಬಹುದು,

ಅಥವಾ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದು.

 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST