ನವದೆಹಲಿ : ರಾಷ್ಟ್ರದ ಕೋಟ್ಯಂತರ ಪಡಿತರ ಚೀಟಿದಾರರ ಪಾಲಿಗೆ ಕೇಂದ್ರ ಸರ್ಕಾರ ಅತ್ಯಂತ ಸಿಹಿಯಾದ ಸುದ್ದಿಯೊಂದನ್ನು ನೀಡಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ಬಡ ಜನರಿಗೆ ವಿತರಿಸಲಾಗುವ ರೇಷನ್ ಅಕ್ಕಿಯ ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ದೇಶದ ಸುಮಾರು 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಇನ್ಮುಂದೆ ಅತ್ಯುತ್ತಮ ಗುಣಮಟ್ಟದ ಅನ್ನ ಸಿಗಲಿದೆ.
ಸಾಮಾನ್ಯವಾಗಿ ರೇಷನ್ ಅಂಗಡಿಗಳಲ್ಲಿ ಸಿಗುವ ಅಕ್ಕಿಯಲ್ಲಿ ನುಚ್ಚಿನ (Broken Rice) ಪ್ರಮಾಣ ಹೆಚ್ಚಾಗಿರುತ್ತಿತ್ತು.
ಆದರೆ ಬಡ ಜನರ ಆರೋಗ್ಯ ಮತ್ತು ಆಹಾರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿರುವ ಸರ್ಕಾರ, ಈ ನುಚ್ಚಿನ ಪ್ರಮಾಣಕ್ಕೆ ಬ್ರೇಕ್ ಹಾಕಿದೆ.
ಇನ್ಮುಂದೆ ರೇಷನ್ ಅಕ್ಕಿಯಲ್ಲಿ ನುಚ್ಚಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ, ಇಡೀ ಅಕ್ಕಿಯನ್ನೇ ಹೆಚ್ಚು ವಿತರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.


