ಬೆಂಗಳೂರು : ಬ್ಯಾಂಕ್ (Bank ) ಗ್ರಾಹಕರಿಗೆ ಇದೀಗ ಸಿಹಿ (Good news ) ಸುದ್ದಿಯೊಂದು ಸಿಕ್ಕಿದೆ. ಡೆಬಿಟ್ ಕಾರ್ಡ್ ಕಳೆದುಹೋದರೆ ಅಥವಾ ಹೊಸ ಕಾರ್ಡ್ ಪಡೆಯಬೇಕೆಂದರೆ ಇನ್ಮುಂದೆ ಬ್ಯಾಂಕ್ ಶಾಖೆಗಳಿಗೆ ಅಲೆಯುವ ಅಗತ್ಯವಿಲ್ಲ.
ಕೊರಿಯರ್ ಮೂಲಕ ಮನೆ ಬಾಗಿಲಿಗೆ ಕಾರ್ಡ್ ಬರಲು ದಿನಗಟ್ಟಲೆ ಕಾಯಬೇಕಾದ ಕಿರಿಕಿರಿಯೂ ಇರುವುದಿಲ್ಲ.ಪ್ರಮುಖ ಬ್ಯಾಂಕುಗಳು ಈಗ ಎಟಿಎಂ (ATM) ಯಂತ್ರಗಳ ಮೂಲಕವೇ ತತ್ಕ್ಷಣ ಹೊಸ ಡೆಬಿಟ್ ಕಾರ್ಡ್ ವಿತರಿಸುವ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಿವೆ.
ಈ ನೂತನ ವ್ಯವಸ್ಥೆಯಡಿ ಗ್ರಾಹಕರು ಎಟಿಎಂ ಸೆಂಟರ್‌ಗಳಲ್ಲಿರುವ ವಿಶೇಷ 'ಕಾರ್ಡ್ ಪ್ರಿಂಟಿಂಗ್ ಕಿಯೋಸ್ಕ್' ಮೂಲಕ ಕೆಲವೇ ನಿಮಿಷಗಳಲ್ಲಿ ಹೊಸ ಡೆಬಿಟ್ ಕಾರ್ಡ್ ಪಡೆದುಕೊಳ್ಳಬಹುದು.
ನಿಮ್ಮ ಖಾತೆಯ ವಿವರ, ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಸರಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿದ ತಕ್ಷಣವೇ ಯಂತ್ರದಿಂದ ಹೊಸ ಕಾರ್ಡ್ ಪ್ರಿಂಟ್ ಆಗಿ ಹೊರಬರುತ್ತದೆ.
ಹಳೆಯ ಕಾರ್ಡ್ ಹಾಳಾಗಿದ್ದಾಗ, ಕಳೆದುಹೋದಾಗ ಅಥವಾ ತುರ್ತಾಗಿ ಹೊಸ ಕಾರ್ಡ್ ಅಗತ್ಯವಿದ್ದಾಗ ಈ ಸೌಲಭ್ಯ ಅತ್ಯಂತ ಉಪಯುಕ್ತವಾಗಲಿದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದ್ದು, ಗ್ರಾಹಕರ ಸಮಯ ಉಳಿತಾಯವಾಗಲಿದೆ.


