Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹರಣ ಶಿಕಾರಿ ( ಪಾರ್ದಿ ) ಸಮಾಜದಿಂದ ಶ್ರೀ ದಂಡಿನ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ  ಜಾತ್ರಾ ಮಹೋತ್ಸವ

Advertisement

ಕಲಾದಗಿ : ಇಲ್ಲಿನ ಪರಣ ಶಿಕಾರಿ ಸಮಾಜದಿಂದ ಹಮ್ಮಿಕೊಂಡಿರುವ ಶ್ರೀ ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಕಲಾದಗಿ ಗ್ರಾಮದಲ್ಲಿ ಜರಗುವ ಕಾರ್ಯಕ್ರಮಗಳು. ಪ್ರತಿವರ್ಷದಂತೆ ಈ ವರ್ಷವೂ ನಡೆದು ಬರುತ್ತಿದೆ. 30ನೇ ವರ್ಷದ ದಿ, ದಲ್ಲಪ್ಪ ಈ ಪೂಜಾರಿ ಹಾಗೂ ದಿ, ರಾಮಣ್ಣ ಬ ಪೂಜಾರಿ ಇವರ ಕೃಪೆಯಿಂದ ಹಮ್ಮಿಕೊಳ್ಳಲಾಗಿದೆ.ದಿನಾಂಕ 26.05.2026 ಮಂಗಳವಾರ ಮುಂಜಾನೆ 9:00 ಗಂಟೆಗೆ  ಉಡಿ ತುಂಬುವ ಕಾರ್ಯಕ್ರಮ, ನಂತರ 11:00 ಗಂಟೆಗೆ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ರಸ್ತೆಗಳಲ್ಲಿ ನಡೆಯುವುದು. ಮಧ್ಯಾಹ್ನ 3 ಗಂಟೆಗೆ ದೇವಿಯ ಪೂಜಾ ಕಾರ್ಯಕ್ರಮಗಳು ಜರುಗುವುದು ಆದಕಾರಣ ಸದ್ಭಕ್ತರೆಲ್ಲರೂ ಆಗಮಿಸಿ ದೇವಿಯ ದರ್ಶನ ಪಡೆದುಕೊಂಡು ಪುನೀತರಾಗಬೇಕು ಮತ್ತು ರಾತ್ರಿ 8 ಗಂಟೆಗೆ ದೇವಿಯ ಭಕ್ತರಿಗೆ ಅನ್ನ ಸಂತರ್ಪಣೆ ಇರುತ್ತದೆ .          

ವಿಶೇಷ ಸ್ಪರ್ಧೆಗಳು  ಶ್ರೀ ದಂಡಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸಮಾಜದ ವತಿಯಿಂದ ನಡೆಯಲಿರುವ ಸ್ಪರ್ಧೆಗಳು ಜಿದ್ದಾ ಜಿದ್ದಿನ ಡೊಳ್ಳಿನ ಗಾಯನ ಸ್ಪರ್ಧೆ, ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ,ಟಗರಿನ ಕಾಳಗ ಸ್ಪರ್ಧೆ, ಮುಧೋಳ ಮತ್ತು ದೇಶಿಯ ನಾಯಿಗಳ ಓಟದ ಸ್ಪರ್ಧೆಗಳು ಮತ್ತು ಗೋಣಿ ಚೀಲ ಹಾಕಿಕೊಂಡು ಜಿಗಿಯುವ ಸ್ಪರ್ಧೆಗಳು,ಹಮ್ಮಿಕೊಳ್ಳಲಾಗಿದೆ.    

ಸ್ಪರ್ಧೆಗಳ ಬಹುಮಾನಗಳು ದಿನಾಂಕ 26.05.2026 ಮಂಗಳವಾರ ರಾತ್ರಿ 9 ಗಂಟೆಗೆ ಜಿದ್ದಾ ಜಿದ್ದಿನ ಡೊಳ್ಳಿನ ಗಾಯನ ಸ್ಪರ್ಧೆಗೆ ಭಾಗವಹಿಸುವ ಶ್ರೀ ಲಕ್ಷ್ಮಿeದೇವಿ ಡೊಳ್ಳಿನ ಗಾಯನ ಸಂಘ ನಾಗೇಶ ಮೇಳ ಸಾ: ಗೋಲಬಾವಿ ಮುಖ್ಯ ಕಾಯಕಿ ಸಣ್ಣ ರೇಖಾ ಹಾಗೂ ಸಂಗಡಿಗರಿಂದ ಮತ್ತು ಶ್ರೀ ರಾಮಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಸುಲ್ತಾನಪುರ ಮುಖ್ಯ ಗಾಯಕಿ ಬಸವ್ವ ಅಕ್ಕಾ ಸುಲ್ತಾನಪುರ  ಹಾಗೂ ಸಂಗಡಿಗರು ಜಿದ್ದಾಜಿದ್ದಿನ ಗಾಯನ ಸ್ಪರ್ಧೆ. ದಿನಾಂಕ 27.05.2026 ಬುಧವಾರ ಸಾಯಂಕಾಲ 5:00 ಗಂಟೆಗೆ ಸಂಗ್ರಾಮ್ ಕಲ್ಲು ಎತ್ತುವ ಸ್ಪರ್ಧೆ ಪ್ರಥಮ ಬಹುಮಾನ 7001ರೂ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 5001ರೂ ಹಾಗೂ  ಟ್ರೋಫಿ, ತೃತೀಯ ಬಹುಮಾನ 3001ರೂ ಹಾಗೂ ಟ್ರೋಫಿ. ದಿನಾಂಕ 28-5-2026 ಗುರುವಾರ ಮಧ್ಯಾಹ್ನ 3 ಗಂಟೆಗೆ ಟಗರಿನ ಕಾಳಗ ಸ್ಪರ್ಧೆಗಳು. 2 ಹಲ್ಲಿನ ಕಾಳಗ ಪ್ರಥಮ ಬಹುಮಾನ 5001ರೂ ಹಾಗೂ 5 ಪುಟ್ ಡಾಲ್, ದ್ವಿತೀಯ ಬಹುಮಾನ  3001ರೂ ಹಾಗೂ ಶಿಲ್ಡು, ತೃತೀಯ ಬಹುಮಾನ  2001ರೂ ಹಾಗೂ ಶಿಲ್ಡು, ಚತುರ್ಥಿ ಬಹುಮಾನ 1501ಹಾಗೂ ಶಿಲ್ಡು. 4 ಹಲ್ಲಿನ ಕಾಳಗ ಪ್ರಥಮ ಬಹುಮಾನ 5001ರೂ ಹಾಗೂ 5 ಪುಟ್ ಡಾಲ್, ದ್ವಿತೀಯ ಬಹುಮಾನ  4001ರೂ ಹಾಗೂ ಶಿಲ್ಡು, ತೃತೀಯ ಬಹುಮಾನ  3001ರೂ ಹಾಗೂ ಶಿಲ್ಡು, ಚತುರ್ಥಿ ಬಹುಮಾನ 2001ಹಾಗೂ ಶಿಲ್ಡು. 6 ಹಲ್ಲಿನ ಕಾಳಗ ಪ್ರಥಮ ಬಹುಮಾನ 7001ರೂ ಹಾಗೂ 5 ಪುಟ್ ಡಾಲ್, ದ್ವಿತೀಯ ಬಹುಮಾನ  5001ರೂ ಹಾಗೂ ಶಿಲ್ಡು, ತೃತೀಯ ಬಹುಮಾನ  3001ರೂ ಹಾಗೂ ಶಿಲ್ಡು, ಚತುರ್ಥಿ ಬಹುಮಾನ 2001ರೂ ಹಾಗೂ ಶಿಲ್ಡು. ದಿನಾಂಕ 29-5-2026 ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಮುಧೋಳ ನಾಯಿ ಮತ್ತು ದೇಸಿ ನಾಯಿಗಳ ಓಟದ ಸ್ಪರ್ಧೆ ಗಳು. ಪ್ರಥಮ ಬಹುಮಾನ 3001ರೂ ಹಾಗೂ ಶಿಲ್ಡು, ದ್ವಿತೀಯ ಬಹುಮಾನ  2001ರೂ ಹಾಗೂ ಶಿಲ್ಡು, ತೃತೀಯ ಬಹುಮಾನ  1501ರೂ ಹಾಗೂ ಶಿಲ್ಡು, ಚತುರ್ಥಿ ಬಹುಮಾನ 1001ಹಾಗೂ ಶಿಲ್ಡು. ನಂತರ ಧೋನಿ ಚೀಲ ಹಾಕಿ ಜಿಗಿಯುವ ಸ್ಪರ್ಧೆಗಳು, ಪ್ರಥಮ ಬಹುಮಾನ 2001ರೂ ಹಾಗೂ ಶಿಲ್ಡು, ದ್ವಿತೀಯ ಬಹುಮಾನ  1501ರೂ ಹಾಗೂ ಶಿಲ್ಡು, ತೃತೀಯ ಬಹುಮಾನ  1001ರೂ ಹಾಗೂ ಶಿಲ್ಡು,  ಈ ಎಲ್ಲ ಕಾರ್ಯಕ್ರಮಗಳು ಹರಣಶಿಕಾರಿ ( ಪಾದ್ರಿ ) ಸಮಾಜದಿಂದ ಹಮ್ಮಿಕೊಳ್ಳಲಾಗಿದೆ ಎಂದು  ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ಯಾಮ ಕಾಳೆ ಹಾಗೂ ಸಮಾಜದ ಮುಖಂಡರು ತಿಳಿಸಿದರು.

ವರದಿ : ಬಸವರಾಜ ಪೂಜಾರಿ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST