ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು 25ಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮವಾಗಿದೆ ಬೆಂಕಿಯ ನರ್ತನಕ್ಕೆ ಬಡಜೀವಗಳ ಸೂರು ಸುಟ್ಟು ಹೋಗಿದ್ದು 20ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿದೆ ಮಗಳ ಮದುವೆಗೆ ಇಟ್ಟಿದ್ದ ಚಿನ್ನ , 2 ಲಕ್ಷ ಹಣ ಕೂಡ ಬೆಂಕಿಯಲ್ಲಿ ಸುಟ್ಟುಕರಕಲಾಗಿದೆ.
ಮದುವೆಗೆ ಇಟ್ಟ ಚಿನ್ನ, ಹಣ ಬೆಂಕಿಗಾಹುತಿ
ಶೆಡ್ನಲ್ಲಿದ್ದ ಬಡಕುಟುಂಬಗಳು ಕೂಡಿಟ್ಟ ಹಣ ಬೆಂಕಿಗಾಹುತಿ ಆಗಿದೆ ಹಾಗೇ ಸಂಗಪ್ಪ ಬೆಗಾರ್ ಎಂಬುವವರು ತನ್ನ ಮೊಮ್ಮಗಳ ಮದುವೆಗೆ ಇಟ್ಟಿದ್ದ 2 ಲಕ್ಷ ಹಣ 20 ಗ್ರಾಂ ಚಿನ್ನ ಕೂಡ ಬೆಂಕಿಯಲ್ಲಿ ಬೆಂದು ಹೋಗಿದೆ ಅಲ್ಲದೇ ಶರಣಪ್ಪ ರಾಂಪುರ ಎಂಬುವವರ ಶೆಡ್‌ನಲ್ಲಿ 20 ಚೀಲ ಜೋಳ ಕೂಡ ಸುಟ್ಟು ಕರಕಲಿದ್ದು ಎಲ್ಲಾ ಕಳೆದು ಕುಟುಂಬಗಳು ಇದೀಗ ಕಣ್ಣೀರು ಹಾಕ್ತಿವೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು, ಶೆಡ್ಗಳಲ್ಲಿ ಇದ್ದ ಸಿಲಿಂಡರ್ ಸ್ಪೋಟಗೊಂಡ ಹಿನ್ನೆಲೆ 25ಕ್ಕೂ ಹೆಚ್ಚು ಗುಡಿಸಲು ಭಸ್ಮವಾಗಿದೆ ಸುಮಾರು 18 ವರ್ಷಗಳಿಂದ ತಾತ್ಕಾಲಿಕ ಶೆಡ್ ನಲ್ಲಿ ವಾಸವಿರುವ ಕುಟುಂಬಗಳು 117 ದಿನಗಳಿಂದ ಶಾಶ್ವತ ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ರು.
ಪ್ರಾಣ ಉಳಿಸಿದ ಪುರಾಣ ಬೆಂಕಿ ಅನಾಹುತ ಸಂಭವಿಸಿದಾಗ ಇದ್ದಲಗಿ ಗ್ರಾಮಸ್ಥರೆಲ್ಲರೂ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಪುರಾಣವನ್ನು ಆಲಿಸಲು ತೆರಳಿದ್ದರು ಹೀಗಾಗಿ ಶೆಡ್‌ನಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ ಬೆಂಕಿ ಹೊತ್ತಿಕೊಳ್ಳಲು ಸಿಲಿಂಡರ್ ಸ್ಫೋಟ ಅಥವಾ ಶಾರ್ಟ್ ಸಕ್ಯೂಟ್ ಕಾರಣವೋ ಎಂಬುದು ಪರಿಶೀಲನೆ ನಡೆಸಲಾಗುತ್ತಿದೆ ಒಂದು ಜಾನುವಾರಿಗೆ ಪ್ರಾಣಹಾನಿ ಆಗಿದೆ ಎಂದು ಹೇಳಲಾಗುತ್ತಿದೆ.
ವರದಿ : ಬಸವರಾಜ ಪೂಜಾರಿ


