ಕಲಾದಗಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಬದಲು ಪತ್ನಿಯಿಂದಲೇ ಚಿಕಿತ್ಸೆ ಸಾರ್ವಜನಿಕರಿಂದ ಆಕ್ರೋಶ. ಕಲಾದಗಿ : ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ ಹೆಚ್ ವಿ ಲೇಬಗಿರಿ ಇವರ ಬದಲು ಯಾವುದೇ ಅರ್ಹತೆ ಇಲ್ಲದೆ ಇವರ ಪತ್ನಿಯೇ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿರುವುದು ಕಂಡುಬಂದಿತು.
ಕಲಾದಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದಾಧಿಕಾರಿ ಡಾ. ಎಚ್ ವಿ ಲೇಬಗಿರಿ ಬದಲು ಯಾವುದೇ ರೀತಿಯ ಅರ್ಹತೆ ಇಲ್ಲದೆ ಅವರ ಪತ್ನಿಯೇ ರೋಗಿಗಳ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ ಹಾಗೂ ಬೇಜವಾಬ್ದಾರಿತನದಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಗಂಭೀರ ಆಕ್ರೋಶಕ್ಕೆ ಕಾರಣವಾಯಿತು.
ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ ಎಂದು ಹೇಳುತ್ತಾರೆ. ಇನ್ನೊಂದು ಕಡೆ ನೋಡಿದಾಗ ವೈದ್ಯರು ಬೇವೋಭವ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿ ವೈದ್ಯ ಹಾಗೂ ಪತ್ನಿ ಸೇರಿ ರೋಗಿಗಳಿಗೆ ಹಾಗೂ ಸರ್ಕಾರಕ್ಕೆ ದ್ರೋಹ ಮಾಡುತ್ತಿದ್ದಾರೆ.
ಇವರ ಪತ್ನಿ ಆಸ್ಪತ್ರೆಯಲ್ಲಿ ಕುಳಿತು ಗರ್ಭಿಣಿಯರು ಸೇರಿದಂತೆ ಹಲವರಿಗೆ ಚಿಕಿತ್ಸೆ ನೀಡಿ ಔಷಧಿ ವಿತರಿಸುತ್ತಿದ್ದ ವೈದ್ಯರ ಪತ್ನಿಯನ್ನು ಇಲ್ಲಿನ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಳು. ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶವಾಗಿ ವ್ಯಕ್ತಪಡಿಸಿದರು ಹಾಗೂ ಒತ್ತಾಯಿಸಿದರು.
ವರದಿ : ಬಸವರಾಜ ಪೂಜಾರಿ


