ಲಕ್ನೋ: ಚೆನ್ನೆöÊ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಗೇಂಟ್ಸ್ ತಂಡಗಳ ನಡುವೆ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೯ ನೇ ಪಂದ್ಯ ಇಂದು ಇಲ್ಲಿ ನಡೆಯಲಿದೆ.
ಭಾರತ ರತ್ನ ಶ್ರೀ ಅಟಲ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ಇಂದು ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ.
ಚೆನ್ನೆöÊ ಸೂಪರ್ ಕಿಂಗ್ಸ್ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಈ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದರೆ, ೧೨ ಪಂದ್ಯಗಳಿAದ ೧೪ ಅಂಕಗಳಿಸಲಿದೆ. ಇದರಿಂದ ಸಿಎಸ್‌ಕೆ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಪಾಯಿಂಟ್ ಪಟ್ಟಿಯಲ್ಲಿ ೪ ನೇ ಸ್ಥಾನಕ್ಕೆ ಜಿಗಿಯಲಿದೆ.
ಇದರೊಂದಿಗೆ ಸಿಎಸ್‌ಕೆಯ ಪ್ಲೇ ಆಪ್ ಹಾದಿಯು ಕೂಡ ಮತ್ತಷ್ಟು ಸುಗಮಗೊಳ್ಳಲಿದೆ. ಹೀಗಾಗಿ ಸಿಎಸ್‌ಕೆಗೆ ಈ ಪಂದ್ಯ ಮಹತ್ವದ್ದಾಗಿದೆ. ಇನ್ನೊಂದೆಡೆ ಲಕ್ನೋ ಸೂಪರ್ ಗೇಂಟ್ಸ್ ಈಗಾಗಲೇ ಪಂದ್ಯಾವಳಿಯಿAದ ಹೊರ ಬಿದ್ದಿದ್ದು, ಆ ತಂಡಕ್ಕೆ ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬAತಾಗಿದೆ.


